Malenadu Mitra
ರಾಜ್ಯಶಿವಮೊಗ್ಗ

ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ

ಕಳೆದ ಜೂನ್​ ನಾಲ್ಕರಂದು ಸಕ್ರೆಬೈಲು ಆನೆ ಬಿಡಾರದ ದಿನಗೂಲಿ ಸಿಬ್ಬಂದಿಗೆ ಪುಡ್​ ಕಿಟ್​ ಒದಗಿಸಿದ್ದ ವೈಲ್ಡ್​ ಟಸ್ಕರ್​ ಸಂಸ್ಥೆಯ ಗೌರವ ಟ್ರಸ್ಟಿ, ಜೆಡಿಎಸ್​ನ ರಾಜ್ಯಪ್ರಧಾನ ಕಾರ್ಯದರ್ಶಿ ಬಾನುವಾರ ಸಕ್ರೈಬೈಲ್​ನ ಆನೆ ಬಿಡಾರದ ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ, ಕಾಯಿಯನ್ನು ವಿತರಿಸಿದರು. ಎರಡು ದಿನಗಳ ಹಿಂದಷ್ಟೆ ಸಕ್ರೆಬೈಲ್​ ಬಿಡಾರಕ್ಕೆ ಭೇಟಿ ಕೊಟ್ಟು ಇಲ್ಲಿನ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದ್ದರು. ಅಲ್ಲದೆ ಅವರ ಸಮಸ್ಯೆಗಳನ್ನು ಆಲಿಸಿದ್ದ ಎಂ ಶ್ರೀಕಾಂತ್​ರವರು ಇವತ್ತು, ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ, ಕಾಯಿಯನ್ನು ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಶ್ರೀಕಾಂತ್​ರವರು ಲಾಕ್​ಡೌನ್​ನಿಂದಾಗಿ ವನ್ಯಜೀವಿಗಳು ಸಹ ಸಂಕಷ್ಟದಲ್ಲಿವೆ, ಆಹಾರಕ್ಕಾಗಿ ಈ ಭಾಗದ ರಸ್ತೆಬದಿಗಳಲ್ಲಿ ಬರುವ ವಾಹನಗಳನ್ನು ಎದುರು ನೋಡುತ್ತಿದ್ದ ಮಂಗಗಳು ಇದೀಗ ಊರುಗಳಿಗೆ ನುಗ್ಗುತ್ತಿವೆ. ಸಂಕಷ್ಟದ ಈ ಸಂದರ್ಭದಲ್ಲಿ ವನ್ಯಜೀವಿಗಳ ಹಸಿವು ನೀಗಿಸಬೇಕಾದ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಈ ವೇಳೆ, ವಲಯ ಅರಣ್ಯಾಧಿಕಾರಿ ಶಿವರಾಜ್ ಮಠದ್​, ವನ್ಯಜೀವಿ ವೈದ್ಯ ಡಾ.ವಿನಯ್​, ಫಾರೆಸ್ಟ್​ ಗಾರ್ಡ್​ ಗೀತಾ, ಜಮೇದಾರ್​ ಜಲೀಲ್​ ಹಾಗೂ ವೈಲ್ಡ್​ ಟಸ್ಕರ್​ ಸಂಸ್ಥೆಯ ನಿರ್ದೇಶಕ ಜೇಸುದಾಸ್​ ಪಿ ಉಪಸ್ಥಿತರಿದ್ದರು.

Ad Widget

Related posts

ಮಾಧ್ಯಮಗಳು ಒಂದು ಸಿದ್ಧಾಂತಕ್ಕೆ ಕಟ್ಟು ಬೀಳಬಾರದು, ಮಲೆನಾಡು ಮಿತ್ರ’ಪತ್ರಿಕೆ ಮರು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಸವಕೇಂದ್ರ ಆಶಯ

Malenadu Mirror Desk

ಆನೆ ಹಾವಳಿ : ಬೆಳೆ ಹಾನಿ ಪರಿಶೀಲಿಸಿದ ಶಾಸಕಿ ಶಾರದಾ ಪೂರ್ಯನಾಯ್ಕ್

Malenadu Mirror Desk

ಸಮುದಾಯ ಹಂತ ಸಿಬ್ಬಂದಿಗಳಿಗೂ ಸುರಕ್ಷತಾ ಕಿಟ್ಟುಗಳನ್ನು ವಿತರಿಸಲು ಸೂಚನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.