ಶಿವಮೊಗ್ಗ್ಗ ನಗರದಲ್ಲಿ ಕುಡಿಯುವ ನೀರಿನ ಬಿಲ್ ಕುರಿತು ಉಂಟಾಗಿದ್ದ ಅಸಮಾಧಾನಕ್ಕೆ ತೆರೆ ಬಿದ್ದಿದ್ದು, ಸಧ್ಯಕ್ಕೆ ತಿಂಗಳಿಗೆ 175 ರೂ. ಬಿಲ್ ನಿಗದಿಪಡಿಸಲು ಶಾಸಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕುಡಿಯುವ ನೀರಿಗೆ ಅವೈಜ್ಞಾಕವಾಗಿ ನೀಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ನಾಗರಿಕ ಹಿತರಕ್ಷಣಾ ವೇದಿಕೆ ಪ್ರಮುಖರು ಹಾಗೂ ಸಾರ್ವಜನಿಕರು ಕುಡಿಯುವ ನೀರಿನ ಸಂಪರ್ಕದಲ್ಲಿ ಆಗಿರುವ ತೊಂದರೆ ಹಾಗೂ ಕುಡಿಯುವ ನೀರಿಗೆ ವಿಧಿಸುತ್ತಿರುವ ಅತ್ಯಧಿಕ ಹಾಗೂ ಅವೈಜ್ಞಾನಿಕ ಶುಲ್ಕದ ಕುರಿತು ಶಾಸಕರ ಗಮನಕ್ಕೆ ತಂದರು. ಪಾಲಿಕೆ ವ್ಯಾಪ್ತಿಯ ಕೆಲವು ಬಡಾವಣೆಗಳಿಗೆ ಕುಡಿಯುವ ನೀರಿನ ಬಿಲ್ ವಿಧಿಸಲಾಗುತ್ತಿದೆ. ಅತ್ಯಧಿಕ ಮೊತ್ತ ವಿಧಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂಬ ದೂರು ಕೇಳಿ ಬಂದಿತ್ತು. ಪ್ರತಿ ತಿಂಗಳು ಪ್ರತಿ ಮನೆಯಿಂದ 175ರೂ. ಕುಡಿಯುವ ನೀರಿನ ಹಣ ಸಂಗ್ರಹ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಇಬ್ಬರು ಕೆಮಿಸ್ಟ್ ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು.
ಈಗಾಗಲೇ 61000 ಮನೆಗಳಿಗೆ 24*7 ಕುಡಿಯುವ ನೀರಿನ ಸಂಪರ್ಕ ನೀಡಬೇಕಿತ್ತು. ಅದರ ಬದಲು ಈಗ18000ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಹೀಗಾಗಿ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸಿದ ನಂತರ ದರ ನಿಗದಿಪಡಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ವೇಳೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರು ಸಭೆಯಲ್ಲಿ ಗಮನಕ್ಕೆ ತಂದರು.
ಈ ವೇಳೆ ಮಾತನಾಡಿದ ಶಾಸಕ ಕೆ.ಎಸ್.ಈಶ್ವರಪ್ಪ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಸಾರ್ವಜನಿಕರಿಗೆ ಹೊರೆ ಉಂಟಾಗಬಾರದು. ನೀರಿನ ಸಂಪರ್ಕ ಕಲ್ಪಿಸುವ ವೇಳೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮೇಯರ್ ಸುನೀತ ಅಣ್ಣಪ್ಪ, ಉಪಮೇಯರ್ ಶಂಕರಗನ್ನಿ, ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ವಸಂತ್ ಕುಮಾರ್, ಸತೀಶ್ ಕುಮಾರ್ ಶೆಟ್ಟಿ, ನೀರು ಸರಬರಾಜು ಮಂಡಳಿ ಅಧಿಕಾರಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಸಾರ್ವಜನಿಕರಿಗೆ ಹೊರೆ ಉಂಟಾಗಬಾರದು. ನೀರಿನ ಸಂಪರ್ಕ ಕಲ್ಪಿಸುವ ವೇಳೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು.
-ಕೆ.ಎಸ್.ಈಶ್ವರಪ್ಪ ಶಾಸಕ
ನಗರದಾದ್ಯಂತ ಎಲ್ಲ ಮನೆಗಳಿಗೆ ನಲ್ಲಿಯ ಸಂಪರ್ಕ ನೀಡಿದ ನಂತರ ಕುಡಿಯುವ ನೀರಿನ ದರ ಕುರಿತು ತೀರ್ಮಾನಿಸಬೇಕು. ಅಲ್ಲಿಯವರೆಗೂ 175ರೂ.ಗಳನ್ನು ಪಾವತಿಸಲಾಗುವುದು. ಯಾವುದೇ ರೀತಿ ತೊಂದರೆಯಾಗದಂತೆ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸಬೇಕು. ಸಾರ್ವಜನಿ ಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಸಾರ್ವಜನಿಕರಿಗೆ ಹೊರೆ ಉಂಟಾಗಬಾರದು. ನೀರಿನ ಸಂಪರ್ಕ ಕಲ್ಪಿಸುವ ವೇಳೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು.
–ವಸಂತ ಕುಮಾರ್ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ
ಸಭೆಯಲ್ಲಿ 175ರೂ. ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ 150 ರೂ. ಇದ್ದುದನ್ನು ಹೆಚ್ಚಿಸಲಾ ಗಿದ್ದು, ಸಾರ್ವಜನಿಕರಿಗೆ ತಿಳಿ ಹೇಳುತ್ತೇವೆ. ಹೋರಾಟಕ್ಕೆ ಬೆಲೆ ನೀಡಿ ದರ ನಿಗದಿಪಡಿಸಿದ ಶಾಸಕ ಈಶ್ವರಪ್ಪ ಅವರಿಗೆ ಕೃತಜ್ಞತೆಗಳು
ಸತೀಶ್ ಕುಮಾರ್ ಶೆಟ್ಟಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ