Malenadu Mitra
ರಾಜ್ಯಶಿವಮೊಗ್ಗ

ಮೇ 10ರಿಂದ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ಆರಂಭ

ಶಿವಮೊಗ್ಗ, ಈಗಾಗಲೇ ಆನ್‍ಲೈನ್ ಮೂಲಕ ದಾಖಲಾತಿ ಮಾಡಿಕೊಂಡ 18ರಿಂದ 45ವರ್ಷದ ಫಲಾನುಭವಿಗಳಿಗೆ ಮೇ 10ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ ಮೇ 11ರಂದು ಇತರ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಶಿವಮೊಗ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ತಿಳಿಸಿದ್ದಾರೆ.

ಈಗಾಗಲೇ ಹೆಸರು ನೋಂದಾಯಿಸಿಕೊಂಡವರ ಮೊಬೈಲ್‍ಗೆ ಲಸಿಕಾ ಕೇಂದ್ರ ಹಾಗೂ ಲಸಿಕೆ ನೀಡುವ ಸಮಯವನ್ನು ಕಳುಹಿಸಲಾಗುವುದು. ಅಂತವರು ಮಾತ್ರ ಲಸಿಕಾ ಕೇಂದ್ರಕ್ಕೆ ಬರಬೇಕು. ಮೇ 10ರಂದು ಮೆಗ್ಗಾನ್‍ನಲ್ಲಿರುವ ಎರಡು ಲಸಿಕಾ ಕೇಂದ್ರಗಳಲ್ಲಿ ತಲಾ 150ಮಂದಿಗೆ ಮಧ್ಯಾಹ್ನ 2ಗಂಟೆ ಬಳಿಕ ಲಸಿಕೆ ನೀಡಲಾಗುವುದು. ಮೇ 11ರಂದು ಬೆಳಿಗ್ಗೆ 10ಗಂಟೆಯಿಂದ ಲಸಿಕೆ ನೀಡಲಾಗುವುದು.

ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಮೇ 11ರಂದು ಬೆಳಿಗ್ಗೆ 10ಗಂಟೆಯಿಂದ ತಲಾ 150 ಮಂದಿಗೆ ಲಸಿಕೆ ನೀಡಲಾಗುವುದು. ಎಲ್ಲಾ ಫಲಾನುಭವಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆಯಬೇಕು ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಮೆಗ್ಗಾನ್ ಆಸ್ಪತ್ರೆಯಲ್ಲಿ 45ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ನೀಡುವ ಕೇಂದ್ರವನ್ನು ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ತರಬೇತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Ad Widget

Related posts

ಗಂಡನಿಗಾಗಿ ಕಾಯುತ್ತಿದ್ದವಳು ಪತ್ನಿ, ಆದರೆ ಕರೆದೊಯ್ದವನು ಮಾತ್ರ ಜವರಾಯ !, ವಿಧಿ ನೀನೆಷ್ಟು ಕ್ರೂರಿ ?

Malenadu Mirror Desk

ಯಶಸ್ಸಿನ ಮೆಟ್ಟಿಲು ಹತ್ತುವುದು ಸವಾಲು :ಕೆ.ಎ.ದಯಾನಂದ ಅವರ “ಹಾದಿಗಲ್ಲು” ಕೃತಿಯ ಬಿಡುಗಡೆಗೊಳಿಸಿ ಪ್ರೊ. ಚೆನ್ನಿ ಹೇಳಿಕೆ

Malenadu Mirror Desk

ರೌಡಿಶೀಟರ್ ಕಾಲಿಗೆ ಗುಂಡು ಹೊಡೆದು ಬಂಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.