ಶಿವಮೊಗ್ಗ ನಗರದಲ್ಲಿ ಸಿ.ಆರ್.ಪಿ.ಸಿ. ಕಲಂ 144 ರ ಅನ್ವಯ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು, ಆ. 20ರ ಬೆಳಿಗ್ಗೆ 6 ಗಂಟೆವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ ರಾತ್ರಿ 9ಗಂಟೆಯಿಂದ ಬೆಳಿಗ್ಗೆ 5.30 ರವರೆಗೆ ತುರ್ತು ಸೇವೆ ಹೊರತುಪಡಿಸಿ, ದ್ವಿಚಕ್ರ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಬೈಕ್ ಗಳಲ್ಲಿ 40 ವರ್ಷ ವಯೋಮಾನದೊಳಗಿನ ಪುರುಷರನ್ನು ಹಿಂಬದಿ ಸವಾರರಾಗಿ ಕೂರಿಸಿಕೊಂಡು ಹೋಗುವಂತಿಲ್ಲ. ರಾತ್ರಿ 9 ಗಂಟೆಯೊಳಗೆ ಎಲ್ಲ ರೀತಿಯ ವ್ಯಾಪಾರದ ಅಂಗಡಿಗಳನ್ನು ಬಂದ್ ಮಾಡಬೇಕು. ರಾತ್ರಿ 9 ಗಂಟೆ ನಂತರ ಸಿನಿಮಾ ಮಂದಿರಗಳಲ್ಲಿ ಚಿತ್ರ ದರ್ಶನಕ್ಕೆ ಅವಕಾಶವಿಲ್ಲವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.