Malenadu Mitra
ರಾಜ್ಯ ಶಿವಮೊಗ್ಗ

ವಿನಯ್ ಗುರೂಜಿಯವರ ಅವಹೇಳನ: ಕಾನೂನು ಹೋರಾಟ


ಶಿವಮೊಗ್ಗ: ಗೌರಿಗದ್ದೆಯ ವಿನಯ್ ಗುರೂಜಿಯವರ ಆರೇಳು ವರ್ಷದ ಹಳೆಯ ವಿಡಿಯೋಗಳನ್ನು ವೈಭವೀಕರಿಸಲಾಗುತ್ತಿದೆ. ಚಂದ್ರು ಸಾವಿಗೂ, ಗುರೂಜಿ ಹಾಗೂ ಮಠಕ್ಕೂ ಸಂಬಂಧವಿಲ್ಲ ಎಂದು ವಿನಯ್ ಗುರೂಜಿ ಭಕ್ತ ಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ಹೊರಗೆ ಬರುತ್ತೆ. ಅನಗತ್ಯವಾಗಿ ಆಶ್ರಮದ ಮೇಲೆ ಆಪಾದನೆ ಹೊರಿಸೋದು ಸರಿಯಲ್ಲ. ಹಳೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದನ್ನ ನಿಲ್ಲಿಸಿ. ಅವಹೇಳನ ಸಂಬಂಧ ಕಾನೂನು ಹೋರಾಟ ಪ್ರಾರಂಭಿಸಿದ್ದೇವೆ ಎಂದರು.

ಗೌರಿಗದ್ದೆಯ ವಿನಯ್ ಗುರೂಜಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದು, ಇದರ ವಿರುದ್ಧ ನ.೧೪ರಂದು ಪ್ರತಿಭಟನಾ ಮೆರವಣಿಗೆ ಮನವಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು  ಎಂದ ಅವರು, ವಿನಯ್ ಗುರೂಜಿಯವರು ಈ ನಾಡಿನ ಧಾರ್ಮಿಕ ನಾಯಕರಾಗಿದ್ದಾರೆ. ಈ ದೇಶದ ಸಂಸ್ಕೃತಿಯ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ನಾಡಿನಾದ್ಯಂತ ಅಲ್ಲದೆ ದೇಶ-ವಿದೇಶಗಳಲ್ಲೂ ಭಕ್ತರಿದ್ದಾರೆ. ಇಂತಹ ವ್ಯಕ್ತಿಯ ಬಗ್ಗೆ ಇತ್ತೀಚೆಗೆ ಅಪಪ್ರಚಾರ ನಡೆಯುತ್ತಿದೆ. ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ಇದು ಅವರ ಭಕ್ತವೃಂದಕ್ಕೆ ತುಂಬಾ ನೋವಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಗುರೂಜಿ ಬಗ್ಗೆ ಅಪಪ್ರಚಾರ ಬರುತ್ತಿದೆ. ಅವರು ಸಲಿಂಗ ಕಾಮಿ ಎಂದು ಬಿಂಬಿಸಲಾಗುತ್ತಿರುವುದರಿಂದ ಭಕ್ತರ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ. ಆಪಾದನೆ ಮಾಡುವವರು ದಾಖಲೆಗಳಿದ್ದರೆ ನ್ಯಾಯಾಲಯದ ಮೊರೆ ಹೋಗಲಿ. ಸರ್ಕಾರ ಸಹ ಈ ಬಗ್ಗೆ ತನಿಖೆ ನಡೆಸಿ ಕಾಣದ ಕೈಗಳಿಗೆ ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.

ಆಶ್ರಮದ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವುದು ಹವ್ಯಾಸವಾಗಿಬಿಟ್ಟಿದೆ. ಗುರೂಜಿಯವರನ್ನು ಅಪರಾಧಿ ಎಂದು ಬಿಂಬಿಸಿ ಭಕ್ತರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ ಎಂದು ದೂರಿದರು.
ಗುರೂಜಿಯವರ ಬೆಂಬಲಕ್ಕೆ ಭಕ್ತರಿದ್ದು, ಇಂತಹ ಅಪಪ್ರಚಾರಕ್ಕೆ ಭಕ್ತರು ಒಳಗಾಗದೆ ಅವರಿಗೆ ಆತ್ಮಸ್ಥೈರ್ಯ ತುಂಬಲು ನ.೧೪ ಬೆಳಿಗ್ಗೆ ೧೦-೩೦ಕ್ಕೆ ಶಿವಪ್ಪನಾಯಕ ಪ್ರತಿಮೆಯ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಘವೇಂದ್ರ ಹೆಬ್ಬಾರ್ ರೂಪೇಶ್, ಚಂದನ್, ಮಾಲತೇಶ್, ಚಂದ್ರಶೇಖರ್ ಇದ್ದರು.

Ad Widget

Related posts

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಬಂದ್: ಸಿಎಂ

Malenadu Mirror Desk

ಆಗಸ್ಟ್‌ನಲ್ಲಿ ರೈಲ್ವೆ ಮೇಲ್ಸೇತುವೆ, ತುಂಗಾ ಸೇತುವೆ ಲೋಕಾರ್ಪಣೆ: ಸಂಸದ ರಾಘವೇಂದ್ರ ಭರವಸೆ

Malenadu Mirror Desk

ಕಟ್ದಡದಿಂದ ಜಿಗಿದು ಆದಿಚುಂಚನಗಿರಿ ಕಾಲೇಜು ವಿದ್ಯಾರ್ಥಿನಿ ಸಾವು,ಪೋಷಕರ ಆಕ್ರಂದನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.