ಮಲೆನಾಡಿನಲ್ಲಿ ಹೆಚ್ಚಾಗಿ ದೀವರ ಸಮುದಾಯದಲ್ಲಿ ಕಡ್ಡಾಯವಾಗಿ ಹಬ್ಬದ ಸಂಪ್ರದಾಯಿಕ ಚಿತ್ರವಾಗಿ ಕಂಡುಬರುವ ಹಸೆ ಚಿತ್ತಾರವನ್ನು ಇವತ್ತಿನ ಯುವ ಪೀಳಿಗೆ ಕಲಿತು ಮುಂದುವರಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಅಂತರ್ ಕಾಲೇಜು ಹಸೆ ಚಿತ್ತಾರ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಸಾಗರದ ಡಾ.ನಾರಿಬೋಲಿಯೇ ಮಹಾ ವಿದ್ಯಾಲಯ ದಲ್ಲಿ ಚಿತ್ತಾರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಹಸೆ ಚಿತ್ತಾರ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಹಸೆ ಚಿತ್ತಾರ ಸಂಶೋಧನಾ ಕೃತಿ ಲೇಖಕ,ಹಸೆ ಚಿತ್ತಾರ ಕಲಾವಿದ ರವಿರಾಜ್ ಸಾಗರ್ ಮಂಡಗಳಲೆ ಉಪಸ್ಥಿತರಿದ್ದು ಹಸೆ ಚಿತ್ತಾರ ಕರ್ನಾಟಕದ ನೆಲಮೂಲದ ಸಾಂಪ್ರದಾಯಿಕ ಚಿತ್ರ ಕಲೆಯಾಗಿದ್ದು ನ್ಯಾಷನಲ್ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಸರ್ಕಾರ ಪ್ರಯತ್ನಿಸಬೇಕು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮೀ ರಾಮಪ್ಪ ಗಡೇಮನೆ ಹಸೆ ಚಿತ್ತಾರ ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಎಂದರು. ಹರನಾತ್ ರಾವ್ , ಡಾ.ರಾಜನಂದಿನಿ , ಕೆ ಎಸ್ ಪ್ರಶಾಂತ್, ನಮಿಟೋ ಕಾಮದಾರ್, ಪುಷ್ಪಲತಾ ಶಿವಕುಮಾರ್ , ಶಿವಕುಮಾರ್, ಉಪಸ್ಥಿತರಿದ್ದರು.ಭವಾನಿ, ಸಂಧ್ಯಾ ಸಿಗಂದೂರು ಚಿತ್ತಾರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.