ಸಮವಸ್ತ್ರ ಧರಿಸಿ ಶಾಲೆಯಲಿ ನಲಿಕಲಿಯಬೇಕಾದ ಹುಡುಗನಿಗೆ ಕಾಲನ ಕರೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಶಾಲೆಗೆ ತಯಾರಾಗುತಿದ್ದ ಹತ್ಬಾತನೇ ತರಗತಿ ಬಾಲಕ ಹಠಾತ್ ಹೃದಯಾಘಾತಕ್ಕೆ ಬಲಿಯಾದ ಘಟನೆ ಸೊರಬ ತಾಲೂಕು ಎಣ್ಣೆಕೊಪ್ಪದಲ್ಲಿ ನಡೆದಿದೆ.
ಬುಧವಾರ ಮುಂಜಾನೆ ಶಾಲೆಗೆ ಹೋಗಲು ಸಿದ್ಧತೆ ತಯಾರಾಗುತ್ತಿದ್ದ ವೇಳೆ ಬಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆತನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ವಿದ್ಯಾರ್ಥಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಓದುವುದರಲ್ಲಿ ಮುಂದಿದ್ದ ಬಾಲಕ, ದೈಹಿಕ ಚಟುವಟಿಕೆಗಳಲ್ಲೂ ಸಹ ನಿಪುಣನಾಗಿದ್ದ. ಆರೋಗ್ಯವಾಗಿದ್ದ ಈಗ ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿ ಮೃತನಾಗಿರುವುದು ದುರಂತವಾಗಿದೆ.