ಶಿವಮೊಗ್ಗ,ಜ.೧೬: ಸಂಕ್ರಾಂತಿ ಹಬ್ಬದ ಹೋರಿ ಬೆದರಿಸುವ ಸ್ಪರ್ಧೆ ಸಂದರ್ಭ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಜೀವಕಳೆದುಕೊಂಡಿದ್ದಾರೆ.
ಶಿವಮೊಗ್ಗ ತಾಲೂಕು ಕೊನಗವಳ್ಳಿಯಲ್ಲಿಹೋರಿ ತಿವಿದ ಕಾರಣ ಶಿವಮೊಗ್ಗ ಆಲ್ಕೊಳದ ಲೋಕೇಶ್(೩೪) ಮೃತಪಟ್ಟಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆ ನೋಡುತ್ತಿದ್ದ ನಿಂತಿದ್ದ ಲೋಕೇಶ್‌ಗೆ ಹೋರಿ ತಿವಿದ ಕಾರಣ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಅಸುನೀಗಿದ.
ಇನ್ನೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕು ಮಳೂರು ಗ್ರಾಮದಲ್ಲಿ ನಡೆದ ಹೋರಿಹಬ್ಬದಲ್ಲಿ ರಂಗನಾಥ್(೨೪) ಹೋರಿ ತಿವಿತದಿಂದಾಗಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.