ಶಿವಮೊಗ್ಗ,ಏ.೧೮: ಮಾನ್ವಿ ಹಾಗೂ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆಯ್ಕೆ ತಡರಾತ್ರಿ ಆಗಬಹುದು, ವರಿಷ್ಠರು ಗೆಲ್ಲುವ ಲೆಕ್ಕಾಚಾರ ನೋಡಿ ಟಿಕೆಟ್ ಹಂಚಿಕೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬುಧವಾರ ಪುತ್ರ ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸಲಿದ್ದು, ಶಿಕಾರಿಪುರಕ್ಕೆ ತೆರಳುವ ಮುನ್ನ ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸವದಿ ಮತ್ತು ಜಗದೀಶ್ ಶೆಟ್ಟರ್ ಅವರು ಪಕ್ಷ ಬಿಟ್ಟಿರುವ ಕಾರಣ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಪತ್ನಿಗೆ ಟಿಕೆಟ್ ಕೊಟ್ಟು ನಿಮ್ಮನ್ನು ರಾಜ್ಯಸಭೆಗೆ ಕಳಿಸಿ ಮಂತ್ರಿ ಮಾಡ್ತೇವೆ ಎಂದು ರಾಷ್ಟ್ರೀಯ ನಾಯಕರು ಹೇಳಿದರೂ, ನಿರ್ಲಕ್ಷ್ಯ ಮಾಡಿದ್ದಾರೆ. ಬಿಜೆಪಿಯಿಂದ ಎಲ್ಲವನ್ನೂ ಪಡೆದು ಅವರು ಈ ಆರೋಪ ಮಾಡುವುದು ಸರಿಯಲ್ಲ ಎಂದರು ಹೇಳಿದರು.
ಶಿವಮೊಗ್ಗ ಮತ್ತು ಮಾನ್ವಿ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಯಾಕೆ ವಿಳಂಬವಾಗುತ್ತಿದೆ ಎಂದು ಗೊತ್ತಿಲ್ಲ. ಯಾರು ಏನೇ ಆರೋಪ ಮತ್ತು ಸುಳ್ಳು ಹೇಳಿದರೂ,ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ವಿಜಯೇಂದ್ರ ಬುಧವಾರ ನಾಮಪತ್ರ ಸಲ್ಲಿಸಲಿದ್ದು, ಕ್ಷೇತ್ರದಲ್ಲಿ ನಡೆಯುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಬಂದ್ದೇನೆ. ನಾಳೆ ಶಿಕಾರಿಪುರದಲ್ಲಿ ಅಪಾರ ಪ್ರಮಾಣದ ಬೆಂಬಲಿಗರು ಸೇರಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.