ಶಿಕಾರಿಪುರ ಬಿಫಾರಂ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡ ಅವರಿಗೆ ಸಿಗಲಿದೆ ಎಂಬ ಕೊನೆಯ ಆಸೆ ಕೈಗೂಡಲಿಲ್ಲ. ಎಐಸಿಸಿ ಅಧ್ಮಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿ ಮತ್ತು ಸಿ ಫಾರಂ ನೀಡಲು ಸಿದ್ದರಿದ್ದರು ಆದರೆ ಸಿದ್ದರಾಮಯ್ಯ ಅವರು ಗೋಣಿ ಮಾಲ್ತೇಶ್ ಹಠದಿಂದಾಗಿ ನಾಗರಾಜಗೌಡರಿಗೆ ನಿರಾಶೆಯಾಗಿದೆ.ಈ ಸಂಬಂಧ ಸುರ್ಜೇವಾಲಾರೊಂದಿಗೂ ಮಾತು ಕತೆ ನಡೆದಿತ್ತು ಎನ್ನಲಾಗಿದೆ
ಮಧ್ಯಾಹ್ನ ಮೂರು ಗಂಟೆಯೊಳಗೆ ತಲುಪಲು ಹೆಲಿಕಾಪ್ಟರ್ ಕೂಡಾ ಬುಕ್ ಮಾಡಿದ್ದರು. ಹೀಗಿದ್ದರೂ ಕೊನೆ ಕ್ಷಣದಲ್ಲಿ ಉಲ್ಟಾ ಆಗಿದೆ. ಒಳ ಒಪ್ಪಂದ ಮಾಡಿಕೊಂಡಿರುವ ಆರೋಪ ಮೊದಲಿಂದಲೂ ಇತ್ತು ಆದರೆ ಆ ಅಪವಾದ ಕಳಚುವ ಅವಕಾಶವನ್ನೂ ಕಾಂಗ್ರೆಸ್ ನಾಯಕರು ಕೈ ಚೆಲ್ಲಿದ್ದಾರೆ.
ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರ ಪ್ರಭಾವ ಇದ್ದು, ಸಿದ್ದರಾಮಯ್ಯರಿಗೆ ಅನುಕೂಲ ಆಗಬಹುದು. ಈ ಕಾರಣದಿಂದ ಶಿಕಾರಿಪುರದಲ್ಲಿ ದುರ್ಬಲ ಅಭ್ಯರ್ಥಿ ಹಾಕಿರಬಹುದು ಎನ್ನಲಾಗಿದೆ.