ಶಿವಮೊಗ್ಗ ತಾಲೂಕು ಆಯನೂರಿನ ನವರತ್ನ ಬಾರ್ ಕ್ಯಾಶಿಯರ್ ಸಚಿನ್ ಹತ್ಯೆ ಆರೋಪಿಗಳಲ್ಲಿ ಒಬ್ಬನನ್ನು ಕುಂಸಿಪೋಲಿಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಕ್ಯಾಶಿಯರ್ ಸತೀಶ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಗಳನ್ನು ಅಶೋಕ್ ನಾಯ್ಕ, ನಿರಂಜನ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿಯನ್ನು ಬಂಧಿಸಲು ಹೋದ ಸಂದರ್ಭ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಕೇಳಲಿಲ್ಲ. ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದ ಸತೀಶ್‌ನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು.
ಅವಧಿ ಮೀರಿದರೂ ಬಾರ್‌ನಲ್ಲಿ ಮದ್ಯಸೇವನೆ ಮಾಡುತ್ತಿದ್ದಾಗ, ಕ್ಯಾಶಿಯರ್ ಬಾಗಿಲು ಹಾಕಬೇಕು ಹೊರಡಿ ಎಂದು ಹೇಳಿದಾಗ, ಆರೋಪಿಗಳು ಸಚಿನ್ ಮೇಲೆ ಹಲ್ಲೆ ನಡೆಸಿದ್ದರು. 112 ಗೆ ದೂರವಾಣಿ ಕರೆ ಮಾಡಿ ಪೊಲೀಸರನ್ನು ಕರೆಸಿದ್ದರೂ ಅವರ ಸಮ್ಮುಖದಲ್ಲಿಯೇ ಆರೋಪಿಗಳು ಸಚಿನ್‌ಗೆ ಚಾಕುವಿನಿಂದ ಇರಿದಿದ್ದರು. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಶಿವಮೊಗ್ಗ ಆಸ್ಪತ್ರೆಗೆ ಕರೆತಂದರೂ ತೀವ್ರ ರಕ್ತಶ್ರಾವವಾಗಿದ್ದರಿಂದ ಸಚಿನ್ ಸಾವುಕಂಡಿದ್ದರು.ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.