ಶಿವಮೊಗ್ಗ : ಕಾರು ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಒಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಸಕ್ರೆಬೈಲು ಸಮೀಪ ಸಂಭವಿಸಿದೆ. ಶಿವಮೊಗ್ಗದಿಂದ ಮಂಗಳೂರಿಗೆ ಹೋಗುತಿದ್ದ ಕಾರಿಗೆ ತೀರ್ಥಹಳ್ಳಿಯಿಂದ ಬರುತಿದ್ದ ಬಸ್ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಮೂವರ ಪೈಕಿ ಒಬ್ಬರು ಅಸುನೀಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದು ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.ಇವರು ಶಿವಮೊಗ್ಗದ ಮಾನಸಿಕ ಆಸ್ಪತ್ರೆಯೊಂದಕ್ಕೆ ಬಂದು ಚಿಕಿತ್ಸೆ ಪಡೆದು ಮರಳುತ್ತಿದ್ದರು ಎನ್ನಲಾಗಿದೆ.
ನುಜ್ಜುಗುಜ್ಜಾದ ಕಾರು
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಜು ಪುಡಿಯಾಗಿದೆ. ಇಂಜಿನ್ ಹೊರತು ಕಾರಿನ ಬಾನೆಟ್ ಸೇರಿದಂತೆ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಕಾರಿನ ಗುರುತು ಸಿಗದಂತಾಗಿದೆ.