Malenadu Mitra
ಶಿವಮೊಗ್ಗ

ಸೂಡೂರು ಗೇಟ್ ಬಳಿ ಅಪಘಾತ : ಯುವಕ ಸಾವು

ಶಿವಮೊಗ್ಗ: ತಾಲೂಕಿನ ಸೂಡೂರು ಗೇಟ್ ಬಳಿಯಿರುವ ದೇವಸ್ಥಾನದ ಕ್ರಾಸ್ ನಲ್ಲಿ ನಡೆದ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.
ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ‌ ಮೂವರು ಯುವಕರು ಗಂಭೀರ ಗಾಯಗೊಂಡಿದ್ದ ಪ್ರಕರಣದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.
ಕಳಸ ಗ್ರಾಮದ ಮನೋಜ್ (19) ಮೃತಪಟ್ಟ ದುರ್ಧೈವಿ.
ಮಾರುತಿ ಅಲ್ಟೋ ಕಾರು ಹಾಗೂ ಸ್ಪ್ಲೆಂಡರ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರು ಗಾಯಗೊಂಡಿದ್ದರು. ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದರೇ, ಕೆಂಚನಾಲ ಗ್ರಾಮದ ಅಕ್ಷಯ್ ಎಂಬ ಯುವಕನಿಗೆ ಕಾಲು ಮುರಿತವಾಗಿದ್ದು ಸ್ಥಿತಿ ಗಂಭೀರವಾಗಿದೆ.
ರಿಪ್ಪನ್‌ಪೇಟೆಯ ಯುವಕ ಮನ್ವಿತ್ ಭಂಡಾರಿಗೆ ಸಹ ಗಾಯವಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Related posts

ಜೆಡಿಎಸ್ ಜಿಲ್ಲಾ ಮಹಿಳಾ ಅಧ್ಯಕ್ಷೆಯಾಗಿ ಗೀತಾ ನೇಮಕ

Malenadu Mirror Desk

ಹಿಂದುಳಿದ ವರ್ಗಕ್ಕೆ ಪ್ರಬಲ ಜಾತಿಗಳು ಬೇಡ

Malenadu Mirror Desk

ತಾಳಗುಪ್ಪದಲ್ಲಿ ರೈಲಿಗೆ ಸಿಕ್ಕು ಕೈ-ಕಾಲು ಕಳೆದುಕೊಂಡ ಯುವಕ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.