Malenadu Mitra
ರಾಜ್ಯ ಶಿವಮೊಗ್ಗ

ಸಂಸದರಿಂದ ಗಣಪತಿ ಉತ್ಸವ ದುರ್ಬಳಕೆ: ಕಾಂಗ್ರೆಸ್ ಆರೋಪ

ಶಿವಮೊಗ್ಗ: ಹಿಂದೂ ಮಹಾಮಂಡಳಿ ಗಣಪತಿ ಉತ್ಸವ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಆದರೆ ಈ ಬಾರಿ ಮೆರವಣಿಗೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮೆರವಣಿಗೆಯನ್ನು ರಾಜಕೀಯ ಗೊಳಿಸುವ ಪ್ರಯತ್ನ ಮಾಡುವ ಮೂಲಕ ಘನತೆ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್. ರಮೇಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆದಿದೆ. ಎಲ್ಲಾ ಪಕ್ಷದ, ಎಲ್ಲಾ ಜನಾಂಗದ ಪ್ರಮುಖರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಆದರೆ ಸಂಸದ ಬಿ.ವೈ. ರಾಘವೇಂದ್ರ ಅವರು, ಮಾತ್ರ ಚುನಾವಣೆಯ ಪ್ರಚಾರಕ್ಕಾಗಿ ಈ ಮೆರವಣಿಗೆಯನ್ನು ಬಳಸಿಕೊಂಡು ರಾಜಕೀಯ ಭಾಷಣ ಮಾಡಿದ್ದಾರೆ ಎಂದರು.

ಶೀನಪ್ಪಶೆಟ್ಟಿ ವೃತ್ತದಲ್ಲಿ ಮೆರವಣಿಗೆಯಲ್ಲಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತಾನಾಡಿದ ಬಿ.ವೈ. ರಾಘವೇಂದ್ರ ಅವರು ಈ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈಭವದಿಂದ ಕೂಡಿದ ಮೆರವಣಿಗೆ ಯನ್ನು ರಾಜಕೀಕರಣಗೊಳಿಸುವ ಅಕ್ಷಮ್ಯ ಕೃತ್ಯವನ್ನು ನಡೆಸಿದ್ದು ಅತ್ಯಂತ ಖಂಡನೀಯ ವಾದುದು. ಸದ್ಯದಲ್ಲೆ ಲೋಕಸಭಾ ಚುನಾವಣೆ ಯಿರುವುದರಿಂದ ಮತ ಕ್ರೋಢೀಕರಣ ದುರುದ್ದೇಶಕ್ಕೆ ಗಣಪತಿ ಮೆರವಣಿಗೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದ ಅವರು, ಸಂಸದರು ಹಿಂದೂ ಮಹಾಮಂಡಳಿಯ ಮತ್ತು ಹಿಂದೂಗಳ ಕ್ಷಮೆ ಕೇಳಬೇಕು ಎಂದರು.

ಹಿಂದೂ ಮಹಾಮಂಡಳಿ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಅದ್ದೂರಿಯಾಗಿ ಮತ್ತು ಶಾಂತಿಯುತ ವಾಗಿ ನಡೆದಿದೆ. ಇದಕ್ಕೆ ಗಣಪತಿ ಸಮಿತಿ ಮತ್ತು ಜಿಲ್ಲಾಡಳಿತದ ಶ್ರಮ ಸಹಕಾರ ಕಾರಣ. ಇದಕ್ಕಾಗಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಆಡಳಿತ, ಹಿಂದೂ ಮಹಾಮಂಡಳಿಯವರಿಗೂ ಧನ್ಯವಾದಗಳು ಎಂದರು.
ಶಾಂತಿಯುತ ಗಣಪತಿ ಮೆರವಣಿಗೆಯ ಯಶಸ್ಸು ಸಮಸ್ತ ಆಸ್ತಿಕ ಸದ್ಭಕ್ತರಿಗೆ ಹಾಗೂ ವಿಶೇಷವಾಗಿ ಅಂದು ನಡೆಯಬೇಕಿದ್ದ ಈದ್ ಮಿಲಾದ್ ಹಬ್ವದ ಮುಸ್ಲಿಂ ಸಮುದಾಯದ ಮೆರವಣಿಗೆಯನ್ನು ಮುಂದೂಡಿ ಸಹಕರಿಸಿದ ಸಮಸ್ತ ಮುಸ್ಲಿಂ ಬಾಂಧವರಿಗೂ ಸಲ್ಲಬೇಕು ಎಂದರು.

ರಾಗಿಗುಡ್ಡ – ಶಾಂತಿನಗರ ಬಡಾವಣೆಯಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಸೌಹಾರ್ದತೆ ಕದಡುವ ಅಹಿತಕರ ಘಟನೆಗಳು ನಡೆದಿರುವುದು ಅತ್ಯಂತ ಖಂಡನೀಯ. ಶಾಂತಿ – ಸೌಹಾರ್ದತೆ ಕದಡುವ ಉದ್ದೇಶ ಹೊಂದಿರುವವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಅವರು ಕಿಡಿಗೇಡಿಗಳೆ ಆಗಿರುತ್ತಾರೆ. ಇಂತಹವರನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಬದ್ಧವಾಗಿದೆ. ನಿನ್ನೆಯ ಘಟನಾವಳಿಗಳ ಬಗ್ಗೆ ಪೊಲೀಸರು ತನಿಖೆ ನಡೆಸಿ ಗಲಭೆಗೆ ಕಾರಣರಾದ ವ್ಯಕ್ತಿಗಳು, ಶಕ್ತಿಗಳು ಯಾರೇ ಆಗಿರಲಿ ಅಂತಹವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್, ಶಿಕಾರಿಪುರ ನಾಗರಾಜಪ್ಪ ಗೌಡ, ಆಸೀಫ್, ಹನುಮಂತು, ಉಮೇಶ್, ಚಂದ್ರ ಶೇಖರ್ ಇದ್ದರು.

Ad Widget

Related posts

ಭದ್ರಾ ಜಲಾಶಯದ ಗರ್ಭದಲ್ಲಿಯೇ ಕಳಪೆ ಕಾಮಗಾರಿ ರೈತ ಮುಖಂಡ ಕೆ.ಟಿ. ಗಂಗಾಧರ್ ತನಿಖೆಗೆ ಆಗ್ರಹ

Malenadu Mirror Desk

ಸಿಎಂ ತವರಲ್ಲಿ ತ್ರಿಶತಕ ದಾಟಿದ ಸೋಂಕು, ಮೂರು ಸಾವು

Malenadu Mirror Desk

ಯುವತಿ ಕೊಲೆಗೈದ ಪಾಗಲ್ ಪ್ರೇಮಿಯೂ ಸಾವು, ಯುವಕನ ಅಪ್ರಬುದ್ಧ ನಡವಳಿಕೆಯಿಂದ ಕಣ್ಣೀರ ಕಡಲಲ್ಲಿ ಹೆತ್ತವರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.