Malenadu Mitra
ರಾಜ್ಯ

ಕಾರವಾರ ಬಿಷಪ್‌ ಆಗಿ ಜೋಗ ಮೂಲದ ಡುಮಿಸ್‌ ಡಾಯಸ್‌ ನೇಮಕ

ಶಿವಮೊಗ್ಗ,ಜ.13: ಕಾರವಾರ ಕಥೊಲಿಕ್‌ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾಗಿ(ಬಿಷಪ್)‌ ಶಿವಮೊಗ್ಗ ಕಥೋಲಿಕ್‌ ಧರ್ಮಕ್ಷೇತ್ರದ ಧರ್ಮ ಗುರುಗಳಾಗಿದ್ದ ಅತಿವಂದನೀಯ ಡುಮಿಂಗ್‌ ಡಾಯಸ್‌ ಅವರನ್ನು ಪೋಪ್‌ ಪ್ರಾನ್ಸಿಸ್‌ ಅವರು ನೇಮಕ ಮಾಡಿದ್ದಾರೆ. ಜ.13 ರಂದು ಪೋಪ್‌, ಶಿವಮೊಗ್ಗ ಮತ್ತು ಕಾರವಾರ ಧರ್ಮಕ್ಷೇತ್ರದಲ್ಲಿ ಏಕಕಾಲಕ್ಕೆ ಈ ಘೋಷಣೆ ಮಾಡಲಾಯಿತು. ಜೋಗ ಮೂಲದವರಾದ ಡುಮಿಂಗ್‌ ಡಾಯಸ್‌ ಅವರು, 1969ರಲ್ಲಿ ಸೆ.3 ರಂದು ದಿ.ಅಂಬ್ರೋಸ್‌ ಡಾಯಸ್‌ ಮತ್ತು ಮರ್ಸಿಲಿನ್‌ ಡಾಯಸ್‌ ಅವರ ಮಗನಾಗಿ ಜನಿಸಿದರು. ಮಂಗಳೂರು, ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಅವರು 1997 ರಲ್ಲಿ ಶಿವಮೊಗ್ಗ ಕಥೋಲಿಕ್‌ ಧರ್ಮಕ್ಷೇತ್ರದಲ್ಲಿ ಗುರುಗಳಾಗಿ ಅಭಿಷೇಕಿಸಲ್ಪಟ್ಟರು. 26 ವರ್ಷಗಳಿಂದ ಶಿವಮೊಗ್ಗ ಧರ್ಮ ಕ್ಷೇತ್ರದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಭಾಗದಲ್ಲಿ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶಿವಮೊಗ್ಗ ಧರ್ಮ ಕ್ಷೇತ್ರದ ಪಾಲನಾ ಕೇಂದ್ರ ಸನ್ನಿಧಿ ಯಲ್ಲಿ ನಿರ್ದೇಶಕರಾಗಿದ್ದರು. ಡುಮಿಸ್‌ ಡಾಯಸ್‌ ಅವರಿಗೆ ಶಿವಮೊಗ್ಗಕಥೋಲಿಕ್‌ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಪ್ರಾನ್ಸಿಸ್‌ ಸೆರಾವೊ ಎಸ್‌.ಜೆ.ಹಾಗೂ ಕ್ರೈಸ್ತ ಭಕ್ತ ಜನತೆ ಅಭಿನಂದನೆಗಳನ್ನು ಸಲ್ಲಸಿದ್ದಾರೆ.

Ad Widget

Related posts

ಶಿವಮೊಗ್ಗದ ಬೇಡಿಕೆ ಪೂರೈಸಲಿರುವ ವಿಐಎಸ್‍ಎಲ್ ಆಮ್ಲಜನಕ ಘಟಕ

Malenadu Mirror Desk

ರಾತ್ರಿತನಕ ಚೆನ್ನಿ ಹೆಸರಿದೆ,ಬೆಳಗ್ಗೆ ಬದಲಾದರೆ ನಮಗೆ ಗೊತ್ತಿಲ್ಲ!
ಕುತೂಹಲ ಉಳಿಸಿಕೊಂಡಿರುವ ಬಿಜೆಪಿ ಶಿವಮೊಗ್ಗ ಅಭ್ಯರ್ಥಿ

Malenadu Mirror Desk

ಡಿನೋಟಿಫಿಕೇಷನ್‌ಗೆ ಸಿಗಲಿಲ್ಲ ಕೇಂದ್ರದ ಸಮ್ಮತಿ
ಶರಾವತಿ ಸಂತ್ರಸ್ಥರಿಗೆ ಕೇಂದ್ರದ ಬರೆ: ಮುಳುಗಡೆ ಸಂತ್ರಸ್ಥರ ಭೂ ಹಕ್ಕಿನ ಕನಸು ನುಚ್ಚು ನೂರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.