Malenadu Mitra
ಜಿಲ್ಲೆ ಶಿವಮೊಗ್ಗ

ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್ ಭೀಕರ ಹತ್ಯೆ.

ಶಿವಮೊಗ್ಗ : ನಗರದಲ್ಲಿ ಹಲವು ತಿಂಗಳ ಬಳಿಕ ಮತ್ತೆ ನೆತ್ತರು ಹರಿದಿದ್ದು, ರೌಡಿಶೀಟರ್ ನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ.
ನಗರದ ಹಳೇ ಬೊಮ್ಮನಕಟ್ಟೆ ಬಳಿ ಮಧ್ಯಾಹ್ನ ಘಟನೆ ನಡೆದಿದ್ದು, ರೌಡಿಶೀಟರ್ ರಾಜೇಶ್ ಶೆಟ್ಟಿ ಭೀಕರವಾಗಿ ಕೊಲೆಯಾಗಿದ್ದಾನೆ.
ಬೊಮ್ಮನಕಟ್ಟೆ ಬಳಿ ನಿಂತಿದ್ದ ರಾಜೇಶ್ ಶೆಟ್ಟಿ ಮೇಲೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಹಳೆಯ ದ್ವೇಷದ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Related posts

ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿ; ಹಾನಿ ಪರಿಶೀಲನೆ,418 ಕೋಟಿ ರೂ.ಆಸ್ತಿಪಾಸ್ತಿ ನಷ್ಟದ ಅಂದಾಜು

Malenadu Mirror Desk

ಹುಂಚಾ ಗ್ರಾಮದಲ್ಲಿ ಕೊರೊನಾಕ್ಕೆ ಯುವಕ ಬಲಿ.

Malenadu Mirror Desk

ಆದರ್ಶಗಳನ್ನು ಅನುಸರಿಸದೇ ಪ್ರತಿಪಾದಿಸುವುದು ಕೂಡಾ ಭ್ರಷ್ಟಾಚಾರ: ಪ್ರಸನ್ನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.