Malenadu Mitra
ಜಿಲ್ಲೆ ರಾಜ್ಯ ಶಿವಮೊಗ್ಗ ಸಾಗರ

ಹಿರಿಯ ಸಾಹಿತಿ ನಾ.ಡಿಸೋಜ ಮಂಗಳೂರಿನಲ್ಲಿ ನಿಧನ

ಶಿವಮೊಗ್ಗ: ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ನಾ.ಡಿಸೋಜ ಅವರು ನಿಧನರಾಗಿದ್ದಾರೆ.
ಮಲೆನಾಡಿನ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಪಡೆಯುವ ಜೊತೆಗೆ ರಾಜ್ಯದಲ್ಲಿ ‘ನಾಡಿ’ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಸಾಹಿತಿ ನಾ.ಡಿಸೋಜಾ ಅವರು, ಮಂಗಳೂರಿನ ಫಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಂದು ಸಂಜೆ ಮೃತಪಟ್ಟಿದ್ದಾರೆ.
ನಾ.ಡಿಸೋಜ ಅವರ ಪುತ್ರ ನವೀನ್‌ ಡಿಸೋಜ ಅವರು ಫೇಸ್‌ಬುಕ್‌ ಪೋಸ್ಟ್ ಹಾಗೂ ವೀಡಿಯೋ ಮೂಲಕ ತಮ್ಮ ತಂದೆಯ ನಿಧನ, ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯ ಕುರಿತು ಮಾಹಿತಿ ನೀಡಿದ್ದಾರೆ.

 

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ನಾ.ಡಿಸೋಜ ಅವರು, ಮಡಿಕೇರಿಯಲ್ಲಿ ನಡೆದ 80 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಕೂಡ ಆಗಿದ್ದರು.

ಸಾಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ:

ಮಂಗಳೂರಿನಲ್ಲಿ ಮೃತಪಟ್ಟಿರುವ ಹಿರಿಯ ಸಾಹಿತಿ ನಾ.ಡಿಸೋಜ ಅವರ ಪಾರ್ಥಿವ ಶರೀರ ನಾಳೆ ಬೆಳಿಗ್ಗೆ ವೇಳೆಗೆ ಶಿವಮೊಗ್ಗದ ಸಾಗರ ನಗರವನ್ನ ತಲುಪಲಿದೆ. ಸೋಮವಾರ ಇಡೀ ದಿನ ಸಾಗರ ನಗರದಲ್ಲಿರುವ ನಾ.ಡಿಸೋಜ ಅವರ ಮನೆ ಬಳಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಹಿರಿಯ ಸಾಹಿತಿ ನಾ.ಡಿಸೋಜ ಅವರ ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ ಎರಡೂ ಒಂದೇ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ಕನ್ನಡ ಸಾಹಿತ್ಯ ಲೋಕಕ್ಕೆ ನಾ.ಡಿಸೋಜಾ ಅವರ ಅಗಲಿಕೆ ತುಂಬಲಾರದ ನಷ್ಟ.

 

-ಬೇಳೂರು ಗೋಪಾಲಕೃಷ್ಣ : ಸಾಗರ ಶಾಸಕರು.

ಮರುದಿನ ಅಂದರೇ ಮಂಗಳವಾರ ಸಾಗರದ ನೆಹರೂ ಮೈದಾನ ಅಥವಾ ಟೌನ್ ಬಳಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನ ಇಡಲು ಕುಟುಂಬಸ್ಥರು ನಿರ್ಧರಿಸಿದ್ದು, ಮಂಗಳವಾರ ಸಂಜೆಯ ವೇಳೆಗೆ ಚರ್ಚ್ ನಲ್ಲಿ ಅಂತಿಮ ವಿಧಿ ವಿಧಾನ ನೆರೆವೇರಿಸಿ, ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಹಿರಿಯ ಸಾಹಿತಿ ನಾ.ಡಿಸೋಜಾ ನಿಧನಕ್ಕೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾಹಿತಿಗಳು ಕಂಬನಿ ಮಿಡಿದಿದ್ದಾರೆ.

 

Ad Widget

Related posts

ಕಲ್ಲು ಎತ್ತಿಹಾಕಿ ಉದ್ಯಮಿ ಕೊಲೆ, ಕಲ್ಲೂರು ಮಂಡ್ಲಿ ತೋಟದಲ್ಲಿ ನಡೆದ ಘಟನೆ

Malenadu Mirror Desk

ಪತಿಯಿಂದಲೇ ಪತ್ನಿಯ ಕೊಲೆ

Malenadu Mirror Desk

ನಿರ್ಮಲ ತುಂಗಭದ್ರಾ ಅಭಿಯಾನ, ಜಲ ಜಾಗೃತಿಗೆ ಕೈಜೋಡಿಸಿದ ಹಲವು ಸಂಘಟನೆಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.