Malenadu Mitra
ಜಿಲ್ಲೆಶಿವಮೊಗ್ಗ

ಡಾ.ಸರ್ಜಿ ಹೆಸರಲ್ಲಿ ಸ್ವೀಟ್ ಗಿಫ್ಟ್ ರವಾನೆ: ಆರೋಪಿ ಅಂದರ್

ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಎನ್ಇಎಸ್ ಕಾರ್ಯದರ್ಶಿ ಮತ್ತು ಇಬ್ಬರು ವೈದ್ಯರಿಗೆ ಕಲಬೆರಕೆ ಲಡ್ಡು ಕಳುಹಿಸಿದ್ದ ಆರೋಪಿಯನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ಮೂಲದ ಸೌಹಾರ್ಧ ಪಟೇಲ್(26) ಬಂಧಿತ ಆರೋಪಿ.
ಆರೋಪಿಯು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಿಬಿಆರ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾನೆ‌.
ಕಾನೂನು ಪದವಿ ಓದುವಾಗ ಎನ್ಇಎಸ್ ಕಾರ್ಯದರ್ಶಿ ನಾಗರಾಜ್ ಅವರು ಬೈಯ್ದಿದ್ದರು. ಈ ಹಿನ್ನೆಲೆಯಲ್ಲಿ ಮನ ನೊಂದಿದ್ದ ಆರೋಪಿ ಸೌಹಾರ್ದ ಪಟೇಲ್‌, ಕೊರಿಯರ್‌ ಮೂಲಕ ಡಾ. ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಹೊಸ ವರ್ಷದ ಶುಭ ಕೋರುವ ಸಂದೇಶದೊಂದಿಗೆ ಸಿಹಿ ತಿಂಡಿಯನ್ನು ಕಾರ್ಯದರ್ಶಿ ಹಾಗೂ ಮತ್ತಿಬ್ಬರು ವೈದ್ಯರಿಗೆ ಕಳುಹಿಸಿದ್ದ. ಈ ಬಾಕ್ಸ್ ಅನ್ನು ತೆರೆದ ವೇಳೆ ಸ್ವೀಟ್‌ ಕಹಿಯಾಗಿರುವುದನ್ನು ಗಮನಿಸಿ, ಸರ್ಜಿ ಗಮನಕ್ಕೆ ಕಾರ್ಯದರ್ಶಿ ನಾಗರಾಜ್ ತಂದಿದ್ದರು. ತಮ್ಮ ಹೆಸರಿನಲ್ಲಿ ಕಹಿಯಾಗಿದ್ದ ಸಿಹಿ ತಿಂಡಿ ರವಾನೆಯಾಗಿರುವ ವಿಚಾರವನ್ನು ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಗಂಭೀರವಾಗಿ ಪರಿಗಣಿಸಿದ್ದರು. ತಾವು ಯಾರಿಗು ಸಿಹಿ ತಿಂಡಿ ಕಳುಹಿಸಿಲ್ಲ ಎಂದ ಸ್ಪಷ್ಟಪಡಿಸಿದ್ದರು. ಘಟನೆ ಸಂಬಂಧ ಡಾ.ಧನಂಜಯ ಸರ್ಜಿ ತಮ್ಮ ಆಪ್ತ ಕಾರ್ಯದರ್ಶಿಯ ಮೂಲಕ ದೂರು ಕೊಡಿಸಿದ್ದರು. ಅಲ್ಲದೇ ಬಿಜೆಪಿ ನಿಯೋಗದ ಮೂಲಕ ಎಸ್ಪಿಗೂ ದೂರು ನೀಡಿದ್ದರು.
ಅದರಂತೆ ಕಾರ್ಯಪ್ರವೃತ್ತರಾಗಿದ್ದ ಕೋಟೆ ಠಾಣೆ ಪೊಲೀಸರು‌, ಆರೋಪಿ ಸೌಹಾರ್ದ ಪಟೇಲ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Ad Widget

Related posts

ಬಡವರ ಭೂಮಿ ತೆರವಿಗೆ ಕಾರಣರಾದ ಶಾಸಕರನ್ನು ಸೋಲಿಸಿ, ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಆಕ್ರೋಶ

Malenadu Mirror Desk

ಧರ್ಮಕೇಂದ್ರಿತ ಸಂಗತಿಗಳಿಂದ ದಾರ್ಶನಿಕರ ಚಿಂತನೆ ಗೌಣ

Malenadu Mirror Desk

ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.