ಸೊರಬ : ದೇಶ, ಸಮಾಜ ಸಮಾನತೆಯಿಂದ ಮುಂದೆ ಸಾಗಿ ಅಭಿವೃದ್ಧಿ ಹೊಂದಲು ಮೊದಲು ಮಹಿಳೆಯರು ಸಂಘಟಿತರಾಗಬೇಕು ಎಂದು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ಎಸ್ ರಾಮಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ಹಾಗೂ ಮಹಿಳಾ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಪಟ್ಟಣದ ನಿಜಗುಣ ರೆಸಿಡೆನ್ಸಿಯಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು,ಸಂಘಟನೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಕೊಂಚ ಹಿಂದುಳಿದ ನಮ್ಮಸಮಾಜಕ್ಕೆ ಒಗ್ಗಟ್ಟಿನ ಬಲ ತುಂಬಾಬೇಕಾಗಿದೆ, ಇನ್ನೊಬ್ಬರನ್ನು ಒಡೆಯಲು ಸಂಘಟನೆಗೆ ಒತ್ತು ನೀಡುವುದಲ್ಲ, ಸಮಾಜದಲ್ಲಿ ಹಿಂದುಳಿದ ವರ್ಗದ ಜನರಿಗೆ ಸಹಕಾರ ನೀಡುವುದೇ ನಮ್ಮ ಉದ್ದೇಶವಾಗಿರಬೇಕು, ದಾನ ಧರ್ಮದ ಮೂಲಕ ಇನ್ನೊಬ್ಬರಿಗೆ ಸಹಕಾರ ನೀಡುವ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡು ಮುನ್ನಡೆಯಬೇಕಿದೆ ಎಂದರು.
ಸಮಾಜದಲ್ಲಿ ಸಾಧನೆ ಮಾಡಲು ಹಣ ಹಣವೊಂದೆ ಮಾನದಂಡವಲ್ಲ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಬಳಿ ತೆರಳಿ ಸಲಹೆ ಸಹಕಾರ ಪಡೆಯುವುದು ಕೂಡ ಮುಖ್ಯವಾಗಿದ್ದು, ಆರ್ಥಿಕವಾಗಿ ಮೇಲೆ ಬರಲು ಛಲದ ಜೊತೆ ಒಗ್ಗಟ್ಟು ಮುಖ್ಯವಾಗಿದ್ದು, ಅರಿತು ಮುಂದೆ ಸಾಗಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ನಾಡು ಕಂಡ ಧೀಮಂತ ನಾಯಕ ಬಂಗಾರಪ್ಪನವರು ನಮ್ಮ ಸಮಾಜದ ಕೇಂದ್ರ ಬಿಂದುವಾಗಿದ್ದಾರೆ ,ಕಾರಣ ತಮ್ಮ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು.ರೈತರ ಪಂಪ್ ಶೆಟ್ಟುಗಳಿಗೆಉಚಿತ ವಿದ್ಯುತ್ ಹಾಗೂ ರೈತರಿಗೆ ಭೂಹಕ್ಕು ನೀಡುವ ಮೂಲಕ ಸಮಾಜದ ಜನರ ಆರ್ಥಿಕ ಪ್ರಗತಿಗೆ ಕಾರಣಿ ಕರ್ತರಾಗಿದ್ದಾರೆ, ನಮ್ಮ ಆರ್ಥಿಕ ಪ್ರಗತಿಗೆ ಕಾರಣರಾದವನ್ನು ಸದಾ ಸ್ಮರಿಸುವ ಗುಣ ನಾವು ಬೆಳೆಸಿಕೊಳ್ಳಬೇಕಿದೆ ಎಂದ ಅವರು ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಆರ್ಥಿಕವಾಗಿ ಬೆಳೆಯುವ ದಾವಂತದಲ್ಲಿ ಕಾಡನ್ನು ವಿನಾಕಾರಣ ಕಡಿದುನಾಶ ಮಾಡದೆ ಅತಿ ಹೆಚ್ಚುಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಯೋಚಿಸುವ ಅಗತ್ಯತೆ ಇದೆ, ನಾವು ಮಾಡುವ ದಾನ ಧರ್ಮದಿಂದ ನಮ್ಮನ್ನು ಗುರುತಿಸುವಂತಾಗಬೇಕೆಹೊರತು ನಮ್ಮಲ್ಲಿರುವ ಹಣ ಅಂತಸ್ತು ಅಧಿಕಾರದಿಂದ ಅಲ್ಲ ಎನ್ನುವುದನ್ನು ಯಾರೂ ಕೂಡ ಮರೆಯಬಾರದು, ಮುಂದಿನ ದಿನಗಳಲ್ಲಿ ಆಧ್ಯಾತ್ಮಿಕ ಮತ್ತು ಕೃಷಿಗೆ ಸಂಬಂಧಪಟ್ಟ ಪುಸ್ತಕಗಳ ಓದುವಿಕೆ ಮತ್ತು ವಿಚಾರ ಸಂಕೀರ್ಣಗಳನ್ನು ಏರ್ಪಡಿಸಿ ಜನರನ್ನು ಜಾಗೃತಿಗೊಳಿಸಲು ಮುಂದಾಗಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ರಾಜು ಹಿರಿಯಾವಲಿ ಮಾತನಾಡಿ, ಕೇವಲ ಸ್ಥಾನಮಾನಕ್ಕಾಗಿ ಸಮಾಜದಲ್ಲಿ ಸಂಘಟನೆಯಲ್ಲಿ ತೊಡಗಿಕೊಳ್ಳುವುದಲ್ಲ, ಸಂಘಟನೆ ಮೂಲಕ ನಮ್ಮ ಸಮಾಜ ಗಟ್ಟಿಗೊಳ್ಳಿಸಿಕೊಳ್ಳುವುದರ ಜೊತೆಗೆ ಇತರೆ ಸಮಾಜದ ಜೊತೆ ಪ್ರೀತಿ ಬಾಂಧವ್ಯ ದಿಂದ ಬೆರೆಯುವ ಪ್ರಯತ್ನವನ್ನು ನಾವೆಲ್ಲರೂ ಮಾಡುವುದರ ಜೊತೆಗೆ ನಮ್ಮ ಮನೆಗಳಲ್ಲಿಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆ ಸಂಘಟನೆ ಮತ್ತು ಶಿಕ್ಷಣಕ್ಕೆ ಪ್ರೇರೇಪಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಆಯ್ದ ಮಹಿಳೆಯರಿಗೆ ಸನ್ಮಾನ ನೀಡಲಾಯಿತು.ಬಿ ಎಸ್ ಎನ್ ಡಿ ಪಿ ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಲೋಕೇಶ ಕಾರ್ಯಕ್ರಮ ಉದ್ಘಾಟಿಸಿದರು.
ರಾಜ್ಯಾಧ್ಯಕ್ಷ ಸೈದಪ್ಪ ಕೆ ಗುತ್ತೇದಾರ್, ತಾಲೂಕು ಮಹಿಳಾ ಅಧ್ಯಕ್ಷೆ ಸುಮಾ ಲೋಕೇಶ್, ಜಿಲ್ಲಾಧ್ಯಕ್ಷ ಎಸ್‍ಡಿ ನಾಯ್ಕ, ರಾಜು ಹಿರಿಯಾವಲಿ, ರವಿ ಕಲ್ಲಂಬಿ,ನಾಗರಾಜ್ ಕೈಸೊಡಿ, ಕಾಂತರಾಜ್, ದುರ್ಗಪ್ಪ ಅಂಗಡಿ,ಸಂಗೀ ಗಣಪತಿ, ವನಿತಾ, ಅನುಸೂಯ, ಶಾಂತಮ್ಮ ಸೇರಿದಂತೆ ಸಂಘದ ಮಹಿಳಾ ಪದಾಧಿಕಾರಿಗಳು ಹಾಜರಿದ್ದರು.