Malenadu Mitra
ರಾಜ್ಯ ಶಿವಮೊಗ್ಗ ಸಾಗರ

ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಯಾಗಬೇಕು, ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಗುಂಡಾ ಜೋಯ್ಸ್ ಅಭಿಮತ

ದೇಶದಲ್ಲಿ ಏಕರೂಪ ಶಿಕ್ಷಣ ಜಾರಿಯಾಗಬೇಕು ಮಾತ್ರವಲ್ಲದೆ, ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸುವ ಅಗತ್ಯವಿದೆ ಎಂದು ೧೬ನೇ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಡಾ. ಗುಂಡ ವೆಂಕಟೇಶ್ ಜೋಯಿಸ್ ಪ್ರತಿಪಾದಿಸಿದರು.
ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆದ ೧೬ನೇ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಷ ಭಾಷಣ ಮಾಡಿದ ಅವರು, ಪ್ರತಿಯೊಬ್ಬರ ಬದುಕಿನಲ್ಲಿ ಬೆಳಕು ಮೂಡಬೇಕಾದರೆ ಶಿಕ್ಷಣ ಅತ್ಯಗತ್ಯ. ಅಂತಹ ಶಿಕ್ಷಣವು ಈಗ ವ್ಯಾಪಾರೀಕರಣಗೊಂಡಿದೆ. ಹಣವಿದ್ದವರಿಗೆ ಮಾತ್ರ ಶಿಕ್ಷಣ ಎನ್ನುವಂತಾಗಿರುವುದು ಅತ್ಯಂತ ಆತಂಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಸರ್ವರಿಗೂ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಶಿಕ್ಷಣವು ಪ್ರಮುಖವಾಗಿ ರಾಷ್ಟ್ರೀಕರಣವಾಗಬೇಕು. ದೇಶದಲ್ಲಿ ಏಕರೂಪ ಶಿಕ್ಷಣ ಜಾರಿಯಾಗಿ ಬರಬೇಕೆಂದು ಅವರು ಅಭಿಪ್ರಾಯಪಟ್ಟರು.

ಬದುಕು ರೂಪಿಸುವ ಮೂಲ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ. ಶಿಕ್ಷಣದಲ್ಲಿ ಚಟುವಟಿಕೆ, ಆಧಾರಿತ , ಸಂಶೋಧನಾ ಅಧಾರಿತ. ವೈಜ್ಞಾನಿಕ ಚಿಂತನೆಗಳ ಮೌಲ್ಯ ಶಿಕ್ಷಣ ಜಾರಿಯಾಗಬೇಕು. ಅನ್ಯಭಾಷೆಗಳ ವ್ಯಾಮೋಹದಲ್ಲಿ ಪ್ರಸ್ತುತ ಮಾತೃಭಾಷೆಯನ್ನು ಕಡೆಗಣಿಸಲಾಗುತ್ತಿದೆ. ಭಾಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಕಾಡುಮೇಡುಗಳಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದವರ ಆಡು ಭಾಷೆಗಳಿಗೆ ಆದ್ಯತೆ ಸಿಗುತ್ತಿಲ್ಲ. ಮಕ್ಕಳಿಗೆ ಒತ್ತಾಯದ ಮೂಲಕ ಭಾಷೆಗಳನ್ನು ಹೇರುವ ಕೆಲಸ ಆಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜನಸಾಮಾನ್ಯರು ಕೇವಲ ಮತದಾನಕ್ಕೆ ಸೀಮಿತವಾಗಿರದೆ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಆ ನಿಟ್ಟಿನಲ್ಲಿ ಅವರನ್ನು ಸಿದ್ಧಗೊಳಿಸುವ ಯೋಜನೆಗಳು ರೂಪಿತವಾಗಬೇಕಾಗಿದೆ. ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕೆ ಪ್ರಥಮ ಆದ್ಯತೆಯನ್ನು ನೀಡಬೇಕು. ವಿಶೇಷವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ನಿರ್ಣಯವಾಗುವ ಎಲ್ಲ ವಿಷಯಗಳನ್ನು ಸರ್ಕಾರವು ಅನುಷ್ಠಾನಗೊಳಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ರೈತರು ಬೆಳೆದ ಬೆಳೆಗೆ ಸೂಕ್ತವಾದ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ರೈತ ದಿಢೀರ್ ಶ್ರೀಮಂತನಾಗುವ ನಿಟ್ಟಿನಲ್ಲಿ ರಾಸಾಯನಿಕ ಸಿಂಪಡಿಸುವುದರ ಮೂಲಕ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಹಾಗಾಗಿ ಸಾವಯವ ಕೃಷಿಯ ಬಗ್ಗೆ ರೈತ ಗಮನಹರಿಸಬೇಕು. ಅಂಗನವಾಡಿಯಿಂದ ವಿಶ್ವವಿದ್ಯಾನಿಲಯದವರೆಗೆ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಆಡಳಿತಾತ್ಮಕ ಸಬಲೀಕರಣ ಮತ್ತು ರಾಜಕೀಯ ಹೊರತಾಗಿ ಬಲವೃದ್ದಿಯಾಗಬೇಕು. ಪ್ರಾದೇಶಿಕ ನೀತಿ ನಿರೂಪಗಳಿಗೆ ಮನ್ನಣೆ ಕೊಡುವುದರ ಮೂಲಕ ಒಂದೇ ದೇಶ ಒಂದೇ ಕಾನೂನು ಅಡಿಯಲ್ಲಿ ಭಾರತ ರೂಪುಗೊಳ್ಳಲು ವಂತಾಗಬೇಕು ಎಂದರು

ಗಾಜಿನ ಮನೆಯಲ್ಲಿ ಯೋಜನೆಗಳು ರೂಪಗೊಳ್ಳುತ್ತಿರುವ ಈ ದಿನಗಳಲ್ಲಿ ಅಧಿಕಾರಿಗಳು ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಳಿತು ಯೋಜನೆಗಳನ್ನು ಸಿದ್ದಪಡಿಸುವಂತಾಗಬೇಕು. ಆ ಮೂಲಕ ನಗರದತ್ತ ವಲಸೆ ಹೋಗುತ್ತಿರುವ ಯುವಶಕ್ತಿಯನ್ನು ಗ್ರಾಮೀಣ ಪ್ರದೇಶದಲ್ಲಿಯೆ ಹಿಡಿದಿಟ್ಟುಕೊಳ್ಳಬಹುದು

-ಗುಂಡಾ ಜೋಯ್ಸ್

Ad Widget

Related posts

ಓಡಿ ಹೋಗುವ ಸಂಸ್ಕೃತಿ ಬಿಜೆಪಿಲಿಲ್ಲ, ತಪ್ಪು ಪುನರಾವರ್ತನೆ ಆಗುವುದು ಬೇಡ : ಜನಸ್ವರಾಜ್ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

Malenadu Mirror Desk

ಗ್ರಾಪಂಗೆ ಒಂದೇ ಒಂದು ಮನೆ ವಿತರಿಸದ ಬಿಜೆಪಿ : ಪತ್ರಿಕಾಗೋಷ್ಟಿಯಲ್ಲಿ ಅಭ್ಯರ್ಥಿ ಪ್ರಸನ್ನಕುಮಾರ್ ಹೇಳಿಕೆ

Malenadu Mirror Desk

ಹರತಾಳು ಕೆರೆ ಜೀರ್ಣೋದ್ದಾರಕ್ಕೆ ನಿರ್ಧಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.