Malenadu Mitra
ರಾಜ್ಯ ಶಿವಮೊಗ್ಗ

ಫೌಂಡ್ರಿಮೆನ್ ಸಂಘಟನೆಗೆ ಉದ್ಯಮಿ ಚಂದ್ರಶೇಖರ್ ಆಯ್ಕೆ, ಶಿವಮೊಗ್ಗ ಫೌಂಡೇಷನ್ ಸಂಘಟನೆಗಳಿಂದ ಸನ್ಮಾನ

ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಸಂಘಟನೆಯ ರಾಷ್ಟ್ರೀಯ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಮೊಗ್ಗದ ಡಿ.ಎಸ್.ಚಂದ್ರಶೇಖರ್ ಅವರನ್ನು ಶಿವಮೊಗ್ಗದ ಫೌಂಡ್ರಿ ಅಸೋಸಿಯೇಷನ್ ವತಿಯಿಂದ ಏ.9 ರಂದು ಸಂಜೆ 5.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಸನ್ಮಾನಿಸಲಾಗುವುದು ಎಂದು ಫೌಂಡರಿಯ ಶಿವಮೊಗ್ಗ ಶಾಖೆಯ ಅಧ್ಯಕ್ಷ ಶ್ರೀನಾಥ್ ಗಿರಿಮಾಜಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಉದ್ಯಮಿಗಳ ಸಂಘಗಳು, ಕೈಗಾರಿಕಾ ಮತ್ತು ವಾಣಿಜ್ಯ ಸಂಘ, ಮಾಚೇನಹಳ್ಳಿ ಕೈಗಾರಿಕೋದ್ಯಮಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಚಂದ್ರಶೇಖರ್ ಅವರನ್ನು ಅಭಿನಂದಿಸಲಾಗುವುದು. ಚಂದ್ರಶೇಖರ್ ಅವರು ದಿ ಇನ್ಸಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಸಂಘಟನೆಯ ಉಪಾಧ್ಯಕ್ಷ 2022ರ ಸೆಪ್ಟೆಂಬರ್‌ನಿAದ 2023ರ ಆಗಸ್ಟ್ ತಿಂಗಳವರೆಗೆ ಉಪಾಧ್ಯಕ್ಷರಾಗಿರುತ್ತಾರೆ. ನಂತರ 2023-24ರ ಅವಧಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದರು.
ಡಿ.ಎಸ್.ಚಂದ್ರಶೇಖರ್ ಮಾಚೇನಹಳ್ಳಿಯಲ್ಲಿರುವ ಶಾಂತಲಾ ಸ್ಪೆರೋಕಾಸ್ಟ್ ವೈಸ್ ಚೇರ್‌ಮನ್ ಆಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಉದ್ಯಮಿಯಾಗಿದ್ದಾರೆ. ಹಲವಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಯಶಸ್ವಿಯಾಗಿ ತಮ್ಮ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು, ಈಗ ರಾಷ್ಟ್ರೀಯ, ಸಂಘಟನೆಯ ಉಪಾಧ್ಯಕ್ಷರಾಗಿರುವುದು ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿಐಸಿಯ ಜಂಟಿ ನಿರ್ದೇಶಕ ಆರ್.ಗಣೇಶ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಪ್ರಮುಖರಾದ ಉಮೇಶ್ ಶಾಸ್ತ್ರಿ ಎಂ.ಎ.ರಮೇಶ್ ಹೆಗಡೆ ಮುಂತಾದವರು ಉಪಸ್ಥಿತರಿರುವರು ಎಂದರು.
ಫೌಂಡ್ರಿಯ ಶಿವಮೊಗ್ಗದ ಘಟಕದ ಸಂಸ್ಥಾಪಕ ಅಧ್ಯಕ್ಷ ದಾಮೋಧರ್ ಬಾಳಿಗ ಮಾತನಾಡಿ, 1950ರಲ್ಲಿ ಪ್ರಾರಂಭವಾದ ದಿ ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಸಂಘಟನೆಯಲ್ಲಿ 2350ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಶಿವಮೊಗ್ಗ ಶಾಖೆಯು 2012 ರಲ್ಲಿ ಆರಂಭವಾಗಿದೆ. ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಫೌಂಡ್ರಿ ಉದ್ಯಮಿಗಳಿದ್ದು, ವಾರ್ಷಿಕವಾಗಿ 120 ಕೋಟಿ ಮೌಲ್ಯದ ಕಾಸ್ಟಿಂಗ್‌ಗಳನ್ನು ಜಗತ್ತಿನ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ. ಸುಮಾರು 6ಸಾವಿರ ಜನರಿಗೆ ಉದ್ಯೋಗ ನೀಡಿದೆ. ಪ್ರತಿವರ್ಷ 600 ಕೋಟಿ ರೂ.ಗಳನ್ನು ಸರ್ಕಾರ ನೀಡುತ್ತಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಎನ್.ಪರಮಶೇಖರ್, ಅಂಕಿತ್ ದಿವಾಕರ್, ಜಿ.ವಿ.ಕಿರಣ್‌ಕುಮಾರ್, ಡಿ.ಜಿ.ಬೆನಕಪ್ಪ ಇದ್ದರು.

Ad Widget

Related posts

ಮೈಲುಗಲ್ಲಾಗಲಿರುವ ಸರಕಾರಿ ನೌಕರ ಭವನ

Malenadu Mirror Desk

ಬೆಂಕಿ ಅವಘಡ ಮೂವರು ಸಾವು,ಒಬ್ಬರು ಗಂಭೀರ, ತೀರ್ಥಹಳ್ಳಿ ತಾಲೂಕಲ್ಲಿ ಹೃದಯ ವಿದ್ರಾವಕ ಘಟನೆ

Malenadu Mirror Desk

ವಿಧಾನಸಭಾ ಚುನಾವಣೆ :ಮಾದರಿ ನೀತಿ ಸಂಹಿತೆ ಜಾರಿ
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಮಾಹಿತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.