Malenadu Mitra
ರಾಜ್ಯ ಶಿವಮೊಗ್ಗ

ಬಿಜೆಪಿ ಎಂದರೆ ಕ್ರಿಯಾಶೀಲತೆ ಎಂದ ಗೃಹ ಸಚಿವ ಆರಗಜ್ಞಾನೇಂದ್ರ

ಶಿವಮೊಗ್ಗದಲ್ಲಿ ಬಿಜೆಪಿ ವಿಭಾಗ ಮಟ್ಟದ ಕಾರ್ಯಕರ್ತರ ಸಭೆ

ಶಿವಮೊಗ್ಗ,ಏ.೧೯: ಜಾತಿ ,ಭಾಷೆಯ ಆಧಾರದ ಮೇಲೆ ಬಿಜೆಪಿ ಪಕ್ಷ ಕಟ್ಟುವುದಿಲ್ಲ. ಕೇವಲ ಚುನಾವಣೆ ಸಂದರ್ಭ ಸಕ್ರಿಯವಾಗುವ ಜಾಯಮಾನ ನಮ್ಮದಲ್ಲ ಬಿಜೆಪಿ ಎಂದರೆ ಸದಾ ಕ್ರಿಯಾಶೀಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು
ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆ ಕಾರಣಕ್ಕೆ ಈ ಸಭೆ ನಡೆಸುತ್ತಿಲ್ಲ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಸಕ್ರಿಯವಾಗುತ್ತವೆ. ಬಿಜೆಪಿ ಯಾವುದೇ ಚುನಾವಣೆಗೆ ಹೆದರುವ ಪಕ್ಷ ಅಲ್ಲ. ಶಿವಮೊಗ್ಗ ಸಂಘಟನಾತ್ಮಕವಾಗಿ ಬೆಳೆದು ಬಂದ ಜಿಲ್ಲೆ ಇಲ್ಲಿ ರಾಷ್ಟ್ರೀಯ ವಿಚಾರಗಳು ಮತ್ತು ಸರಕಾರದ ಸಾಧನೆಯ ಮೇಲೆ ಜನರ ವಿಶ್ವಾಸ ಗಳಿಸುತ್ತೇವೆ ಎಂದು ಹೇಳಿದರು.
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಇವುಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಹುಬ್ಬಳ್ಳಿಯಲ್ಲಿ ದುಷ್ಕರ್ಮಿಗಳು ನಡೆಸಿದ ಗಲಬೆಯಲ್ಲಿ ಎರಡು ಗಂಟೆಯಲ್ಲಿ ನಿಯಂತ್ರಿಸಿರುವುದು ನಮ್ಮ ತಾಕತ್ ಪೊಲೀಸರು ಶ್ರಮ ಪಟ್ಟು ಈ ಕೆಲಸ ಮಾಡಿದ್ದಾರೆ ಎಂದು ಜ್ಞಾನೇಂದ್ರ ಅವರು ತಮ್ಮ ಇಲಾಖೆಯನ್ನು ಹೊಗಳಿಕೊಂಡರು.

ಹಿಂದಿನ ಸರಕಾರದಲ್ಲಿ ಗೃಹ ಇಲಾಖೆಯೇ ಇರಲಿಲ್ಲ. ಒಬ್ಬ ನಿವೃತ್ತ ಅಧಿಕಾರಿ ಎಲ್ಲವನ್ನೂ ನಿಯಂತ್ರಿಸುತ್ತಿದ್ದರು. ಆದರೆ ನಮ್ಮ ಸರಕಾರದಲ್ಲಿ ಯಾವುದೇ ಏಜೆಂಟ್‌ಗಳಿಲ್ಲ.ಪೊಲೀಸರು ನಿರಾತಂಕವಾಗಿ ಕೆಲಸ ಮಾಡುತ್ತಿದ್ದಾರೆ. ಪುನೀತ್‌ರಾಜ್‌ಕುಮಾರ್ ಅಂತ್ಯಸಂಸ್ಕಾರದಲ್ಲಿಯೂ ಪೊಲಿಸರು ಶಿಸ್ತುಬದ್ದವಾಗಿ ಕೆಲಸ ಮಾಡಿದ್ದಾರೆ ಎಂದರು.
ಮುಂದಿನ  ಏಳೆಂಟು ತಿಂಗಳಲ್ಲಿ  ಚುನಾವಣೆ ಇದೆ ಕಾರ್ಯಕರ್ತರು ಅವಿರತ ಶ್ರಮ ಹಾಕಬೇಕು. ದೇಶದ ಕಾಂಗ್ರೆಸ್‌ನ ಆಕ್ಷಿಜನ್ ಸಿಲೆಂಡರ್ ಕರ್ನಾಟಕದಲ್ಲಿದೆ ಅದನ್ನು ಕಿತ್ತುಹಾಕಿ ಕಾಂಗ್ರೆಸ್‌ಮುಕ್ತ ದೇಶ ಮಾಡಬೇಕೆಂದು ಜ್ಞಾನೇಂದ್ರ ಕರೆನೀಡಿದರು.
ಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಅಶ್ವಥ್‌ನಾರಾಯಣ್, ಶ್ರೀರಾಮುಲು, ಮಾಜಿ ಸಚಿವರಾದ ಲಕ್ಷ್ಮಣ್ ಸವದಿ ಹಾಗೂ ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ , ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ  ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಉಪಸ್ಥಿತಿ. ಪ್ರಮುಖರಾದ ನಿರ್ಮಲ್ ಕುಮಾರ್ ಸುರಾನ, ನಯನಾ ಗಣೇಶ್, ಎಂ.ಬಿ.ಭಾನುಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Ad Widget

Related posts

ಡಿಆರ್ ಡಿಒ ಲ್ಯಾಬ್ ಚಿಂತನ ಮಂಥನ

Malenadu Mirror Desk

ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ ಗೆಲವು ಶತಸಿದ್ಧ: ಕಾಂಗ್ರೆಸ್ ನಾಯಕರು, ಹೊಸಮುಖ ಮತ್ತು ಶಾಂತಿಸೌಹಾರ್ದತೆ ಶಿವಮೊಗ್ಗಜನ ಬಯಸುತ್ತಾರೆ

Malenadu Mirror Desk

ಮುಂದುವರಿದ ಮಳೆ, ಘಟ್ಟದ ಸಾಲಿನಲ್ಲಿ ಜಲಪಾತಗಳ ಚತ್ತಾರೆ ತುಂಬಿದ ಪುರದಾಳು ಡ್ಯಾಂ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.