ಶಿವಮೊಗ್ಗ,ಜೂ.೨೧: ಹಿಡಿಯಲು ಹೋದ ಪೊಲೀಸ್ ಪೇದೆಗೆ ಚಾಕು ಹಾಕಿದ್ದ ರೌಡಿ ಶಾಹಿದ್ ಖುರೇಶಿ(೨೨)ಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ರೌಡಿ ಉಪಟಳದ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಮಂಗಳವಾರ ಬೆಳಗ್ಗೆ ಆತನನ್ನು ಹಿಡಿಯಲು ಹೋದ ಸಂದರ್ಭ ಆತ ಪೊಲೀಸರ ಮೇಲೆ ಎರಗಿದ್ದು, ಈ ವೇಳೆ ಗುರುನಾಯ್ಕ್ ಎಂಬ ಪೊಲೀಸ್ ಪೇದೆ ಎದೆಗೆ ಚಾಕುವಿನಿಂದ ಚುಚ್ಚಿದ್ದ. ಈ ವಿಚಾರ ಪೊಲೀಸ್ ವಲಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಗಾಯಾಳು ಪೇದೆಯನ್ನು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮಧ್ಯಾಹ್ನ ಖುರೇಶಿಯನ್ನು ಬಂಧಿಸಲು ಹೋದ ಸಂದರ್ಭ ಆತ ಮತ್ತೆ ಪೊಲೀಸರ ಮೇಲೆ ಲಾಂಗು ಬೀಸಲು ಮುಂದಾದ ಈ ಸಂದರ್ಭ ಆತ್ಮ ರಕ್ಷಣೆಗೆ ಮುಂದಾದ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಯನ್ನು ಮೆಗ್ಗಾನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಲಾಗಿದೆ.