Malenadu Mitra
ರಾಜ್ಯ ಶಿವಮೊಗ್ಗ

ಅಣ್ಣಿ ಕೊಲೆ ತನಿಖೆ ಮತ್ತೊಂದು ಕೊಲೆಗೆ ನಡೆದಿದ್ದ ಸಂಚು ಬಯಲು : ಮೂವರ ಬಂಧನ

ಶಿವಮೊಗ್ಗ ವಿನೋಬನಗರದಲ್ಲಿ ನಡೆದಿದ್ದ ರೌಡಿ ಹಂದಿ ಅಣ್ಣಿ ಕೊಲೆ ಪ್ರಕರಣ ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಇನ್ನೊಂದು ಕೊಲೆಗೆ ಸ್ಕೆಚ್ ಹಾಕಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
೨೦೧೮ ರಲ್ಲಿ ನಡೆದಿದ್ದ ರೌಡಿ ಶೀಟರ್ ಬಂಕ್ ಬಾಲುವನ್ನು ಕೊಲೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಂಬುಯಾನೆ ಅನಿಲ್ ನನ್ನು ಕೊಲೆ ಮಾಡಲು ಸಿದ್ಧತೆ ನಡೆಸಿದ್ದ ಚಂದನ್ ಮತ್ತು ವಿಘ್ನೇಶ್ ಎಂಬುವರರನ್ನು ಹಾಗೂ ಇವರ ಆಯುಧಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಕಿರಣ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.


ಹಂದಿ ಅಣ್ಣಿ ಕೊಲೆಯಲ್ಲಿ ಬಂಕ್ ಬಾಲು ಶಿಷ್ಯರ ಪಾತ್ರವಿದೆ ಎಂದು ಹೇಳಲಾಗುತಿದ್ದು, ಈ ನೆಲೆಯಲ್ಲಿ ತನಿಖೆ ಮುಂದುವರಿಸಿದ್ದ ಪೊಲೀಸರಿಗೆ ಅಂಬು ಕೊಲೆಗೂ ಸಂಚು ನಡೆದಿರುವ ಮಾಹಿತಿ ಲಭ್ಯವಾಗಿದೆ.
ಬಾಲು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಅಂಬು ಅಲಿಯಾಸ್ ಅನಿಲ್ ಜೈಲಿನಿಂದ ಹೊರಬಂದ ಮೇಲೆ ಮಂಗಳೂರಿನಲ್ಲಿದ್ದಾನೆ ಎಂದು ಹೇಳಲಾಗಿದೆ. ದೊಡ್ಡ ಪೇಟೆ ಪೊಲಿಸ್ ಠಾಣೆಯಲ್ಲಿ ಬಂಧಿತರ ವಿರುದ್ಧ ಪ್ರಕರಣ ದಾಖಲಾಗಿದೆ.

Ad Widget

Related posts

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆ, ಬಿಜೆಪಿಗೆ ಮುಖಭಂಗ ಅವಿಶ್ವಾಸ ನಿರ್ಣಯಕ್ಕೆ ಗೆಲುವು, ಬಿಜೆಪಿ ಪರ ಕೇವಲ 3 ಮತ

Malenadu Mirror Desk

ಬಿಜೆಪಿ ಸಭೆಯೂ..ರಂಗಾದ ನಗರವೂ..

Malenadu Mirror Desk

ದರ್ಶನ್ ಟೀಮ್ ಗೆ ಜಾಮೀನು :ಶ್ಯೂರಿಟಿ ಸಿಗದೇ ಜೈಲಲ್ಲೇ ಉಳಿದ ಜಗದೀಶ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.