Malenadu Mitra
ರಾಜ್ಯ ಶಿವಮೊಗ್ಗ

ಕುಮಾರ್ ಬಂಗಾರಪ್ಪ ವಿರುದ್ಧ ಸೊರಬ ಬಿಜೆಪಿಯಲ್ಲಿ ಮತ್ತೆ ಅಪಸ್ವರ, ಜನರನ್ನು ಪ್ರೀಯಿಂದ ಕಾಣದ ವ್ಯಕ್ತಿ ಜನನಾಯಕನಲ್ಲ: ಪದ್ಮನಾಭ ಭಟ್

ಸೊರಬ : ಜನ ಸಾಮಾನ್ಯರನ್ನು ಪ್ರೀತಿ, ಗೌರವದಿಂದ ಕಾಣದ ವ್ಯಕ್ತಿಯನ್ನು ಜನನಾಯಕ ಎಂದು ಕರೆಯಲು ಸಾಧ್ಯವಿಲ್ಲ. ಶಾಸಕ ಕುಮಾರ್ ಬಂಗಾರಪ್ಪ ಅವರ ಸರ್ವಾಧಿಕಾರಿ ಧೋರಣೆಗೆ ಇತಿಶ್ರೀ ಹಾಡಲು ಜನರು ಒಂದಾಗಬೇಕಿದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಪದ್ಮನಾಭ್ ಭಟ್ ವಾಗ್ದಾಳಿ ನಡೆಸಿದರು.
ಪಟ್ಟಣದ ಗಿರಿಜಾ ಶಂಕರ ಸಭಾ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ೭೨ನೇ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ನಮೋ ವೇದಿಕೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ ಅವರ ವಿರುದ್ಧವಾಗಿ ರಾಜಕಾರಣ ಮಾಡಿದ್ದೇವೆ. ಆದರೆ ಅವರು ಎಂದೂ ನಮ್ಮನ್ನು ದ್ವೇಷ ಮಾಡಲಿಲ್ಲ. ಆದರೆ ಕುಮಾರ್ ಬಂಗಾರಪ್ಪ ತಮಗೆ ರಾಜಕೀಯ ಮರುಜನ್ಮ ನೀಡಿದ ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ಗೌರವದಿಂದ ಕಾಣುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಸ್ವಾಭಿಮಾನಿ ಕಾರ್ಯಕರ್ತರು ಅವರ ವಿರುದ್ಧವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ ನಮೋ ವೇದಿಕೆ ಹುಟ್ಟು ಹಾಕಿರುವುದು ಹೊಸ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಬದುಕಿನಲ್ಲಿ ಜನರ ಪರವಾಗಿ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಶ್ರಮಿಸುವ ಯಾವುದೇ ವ್ಯಕ್ತಿ ರಾಜಕಾರಣದಲ್ಲಿ ಬಹುಕಾಲ ಉಳಿಯಬಲ್ಲ. ಈ ಕಾರಣದಿಂದ ಮಾಜಿ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ, ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ ಅವರನ್ನು ಜನರು ಸದಾ ಸ್ಮರಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ನಾನು ಎನ್ನುವುದಕ್ಕೆ ಅವಕಾಶವಿಲ್ಲ ಎಂದರು.
ನಮೋ ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಮಾತನಾಡಿ, ಮೂಲ ಬಿಜೆಪಿ ಮುಖಂಡರನ್ನು ಕಡೆಗಣಿಸಿ ಆಡಳಿತ ನಡೆಸುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ಅವರ ದರ್ಪವನ್ನು ಕೊನೆಗಾಣಿಸಲು ನಮೋ ವೇದಿಕೆ ಹುಟ್ಟು ಹಾಕಲಾಗಿದೆ. ೪ ವರ್ಷಗಳ ಕಾಲ ಪಕ್ಷದ ಹಿರಿಯರಿಗೆ ಬೆಲೆ ಕೊಡದೇ ಇರುವುದನ್ನು ಜಿಲ್ಲಾ ಸಮಿತಿಗೆ ತಂದರೂ ಪ್ರಯೋಜನವಾಗಲಿಲ್ಲ. ಅನಿವಾರ್ಯವಾಗಿ ಕಾರ್ಯಕರ್ತರ ರಕ್ಷಣೆ ಹಾಗೂ ತಾಲ್ಲೂಕಿನ ಅಭಿವೃದ್ಧಿಗಾಗಿ ವೇದಿಕೆ ಹುಟ್ಟು ಹಾಕಿರುವುದಾಗಿ ತಿಳಿಸಿದರು.
ದಿವಾಕರ್ ಭಟ್ ಭಾವೆ, ದ್ವಾರಳ್ಳಿ ಮಲ್ಲಿಕಾರ್ಜುನ, ರಾಜಶೇಖರ್ ಗಾಳಿಪುರ, ಗಜಾನನರಾವ್ ಉಳವಿ, ಎ.ಎಲ್.ಅರವಿಂದ್, ಗುರುಪ್ರಸನ್ನಗೌಡ, ಗೀತಾ ಮಲ್ಲಿಕಾರ್ಜುನ, ಕುಸಮಾ ಪಾಟೀಲ್, ಬೆನವಪ್ಪ, ಚಂದ್ರಪ್ಪ ಬರಗಿ, ವಿಜಯೇಂದ್ರಗೌಡ, ಬಸವರಾಜ ಭಾರಂಗಿ, ಯೋಗೇಶ್ ಓಟೂರು, ಸತೀಶ್. ಆನಂದಪ್ಪ ಕುಪ್ಪಗಡ್ಡೆ, ಅಶೋಕ, ಗಣಪತಿ ಕಪ್ಪಗಳಲೆ ಮತ್ತಿತರರು ಇದ್ದರು.

ಕುಮಾರ್ ಬಂಗಾರಪ್ಪ ಅವರಿಗೆ ನಾನು, ನನ್ನಿಂದಲೇ ಎನ್ನುವ ಅಹಂ ಇರುವುದರಿಂದಲೇ ಅವರ ಜೊತೆ ರಾಜಕಾರಣ ಆರಂಭಿಸಿದ ಮುಖಂಡರು ಯಾರು ಅವರ ಜೊತೆ ಇಲ್ಲ. ಅವರ ರಾಜಕೀಯ ನೆಲೆ ಛಿದ್ರಗೊಳಿಸಲು ತಾಲ್ಲೂಕಿನ ಜನರು ಇಂದು ಅವರ ವಿರುದ್ಧ ಸಿಡಿದೆದಿದ್ದಾರೆ

ಪದ್ಮನಾಭ ಭಟ್, ಬಿಜೆಪಿ ಮುಖಂಡ

Ad Widget

Related posts

ಷಡಾಕ್ಷರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ

Malenadu Mirror Desk

ಸೊನಲೆಯಲ್ಲಿ ಅಮ್ಮನ ಹಬ್ಬದ ಸಂಭ್ರಮ, 25 ವರ್ಷ ಬಳಿಕ ಸ್ವಾಮಿರಾವ್ ಮನೆಯಲ್ಲಿ ಮನೆದೇವತೆ ಆರಾಧನೆ

Malenadu Mirror Desk

ಪುನೀತ ದರ್ಶನಕ್ಕೆ ಜನಸಾಗರ, ಮಲೆನಾಡಿನೊಂದಿಗೆ ಮಧುರ ಬಾಂಧವ್ಯ ಹೊಂದಿದ್ದ ಅಪ್ಪು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.