Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಬಿಜೆಪಿ ಸರ್ಕಾರ ದ್ವೇಷ ಬಿತ್ತುವ ಮೂಲಕ ರಾಜ್ಯದ ಜನರ ಆಕ್ರೋಶಕ್ಕೆ ತುತ್ತಾಗಿದೆ.

ಬಿಜೆಪಿ ಆಡಳಿತದಲ್ಲಿನ ಮಿತಿಮೀರಿದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದ್ವೇಷ ಬಿತ್ತುವ ಮೂಲಕ ರಾಜ್ಯದ ಜನರ ಆಕ್ರೋಶಕ್ಕೆ ತುತ್ತಾಗಿದೆ. ಆಡಳಿತ ವೈಫಲ್ಯ ವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ೧೫೦ ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸಾಗರದಲ್ಲಿ ಅವರು  ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಮನೆಯಲ್ಲಿ ಭೋಜನ ಸ್ವೀಕರಿಸಿದ ನಂತರ ಪತ್ರಕರ್ತ ರೊಂದಿಗೆ ಮಾತನಾಡಿದರು.

೪೦% ಕಮಿಷನ್ ಸರ್ಕಾರ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಬೆಲೆ ಏರಿಕೆ ವಿರುದ್ಧ ಹಾಗೂ ನಿರುದ್ಯೋಗ ಸಮಸ್ಯೆ ವಿರುದ್ಧ ಚುನಾ ವಣೆಯಲ್ಲಿ ಮತ ಚಲಾಯಿ ಸುವ ಮೂಲ ಕವೇ ಜನ ಉತ್ತರ ನೀಡಲಿದ್ದಾರೆ ಎಂದರು.

ಭಾರತ್ ಜೋಡೋ ಯಾತ್ರೆ ಸಂಚಲನ ಮೂಡಿಸಿರುವ ಹೊತ್ತಲ್ಲಿ ಕಾಂಗ್ರೆಸ್‌ನಲ್ಲಿರುವ ಭಿನ್ನಮತ ಶಮನಕ್ಕೆ ಯಾವ ಪ್ರಯತ್ನ ಮಾಡು ವಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ ಮನೆಯಲ್ಲಿ ಜಗಳ ಅಥವಾ ಅಭಿಪ್ರಾಯ ಬೇಧಗಳು ಸಹಜವಾಗಿರುತ್ತವೆ. ಪಕ್ಷದ ಚೌಕಟ್ಟಿನಲ್ಲಿ ಇದಕ್ಕೆ ಸೂಕ್ತ ಪರಿಣಾಮಕಾರಿ ಯಾದ ಪರಿಹಾರ ಕಂಡುಕೊಳ್ಳುತ್ತೇವೆ. ಸಂಘಟಿತರಾಗಿ ರಚನಾತ್ಮಕ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ೪-೫ ಪ್ರಬಲ ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿ ಗಳಾಗಿರುವುದರಿಂದ ಆಯ್ಕೆಗೆ ತೊಡಕಾಗು ವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಸಹಜವಾಗಿ ರುತ್ತದೆ. ೧೦ ಅಭ್ಯರ್ಥಿಗಳು ಪೈಪೋಟಿ ನಡೆಸಿ ದರೂ ಪರಸ್ಪರ ಚರ್ಚೆ ಸಮಾ ಲೋಚನೆಯ ಮೂಲಕ ಪಕ್ಷದ ಗೆಲುವಿಗೆ ಹಾಗೂ ತತ್ವ ಸಿದ್ದಾಂತಗಳಿಗೆ ಬೆಲೆ ನೀಡುವ ಪೂರಕ ಅಭ್ಯ ರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.

ಸಾಗರದ ಕಾರ್ಯಕರ್ತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಆಕಸ್ಮಿಕ ಅಪಘಾತ ದಿಂದ ಮೃತಪಟ್ಟಿರುವ ಘಟನೆ ನೋವು ತಂದಿದೆ. ರಾಷ್ಟ್ರೀಯ ನಾಯಕ, ಜೋಡೋ ಯಾತ್ರೆಯ ರೂವಾರಿ ರಾಹುಲ್ ಗಾಂಧಿ ಸೂಚನೆ ಮೇರೆಗೆ    ಕಾರ್ಯಕ್ರಮದಲ್ಲಿ ತೊಡಗಿಕೊಂಡಾಗ ಮೃತಪಟ್ಟಿರುವುದರಿಂದ ಹುತಾತ್ಮನ ಕುಟುಂಬಕ್ಕೆ ಪರಿಹಾರದ ಮೂಲಕ ಖುದ್ದು ಸಾಂತ್ವನ ಹೇಳಿದರು.

ಕಾಗೋಡು ತಿಮ್ಮಪ್ಪ,ಕಾಂಗ್ರೆಸ್ ರಾಜ್ಯ ಬಿಸಿಎಂ ಘಟಕ ರಾಜ್ಯಾಧ್ಯಕ್ಷ ಮಾಜಿ ಶಾಸಕ ಮಧು ಬಂಗಾರಪ್ಪ ಕೆಪಿಸಿಸಿ ಕಾರ್ಯ ದರ್ಶಿ ಡಾ|| ರಾಜನಂದಿನಿ ಕಾಗೋಡು, ಕೆಪಿಸಿಸಿ ವಕ್ತಾರ ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು,, ಜಿಲ್ಲಾಧ್ಯಕ್ಷ ಸುಂದರೇಶ್ ಉಪಸ್ಥಿತರಿದ್ದರು.

Ad Widget

Related posts

ಶಿವಮೊಗ್ಗದಲ್ಲಿ ಶೇ.೮೩ ಮತದಾನ

Malenadu Mirror Desk

ಶಿವಮೊಗ್ಗದಲ್ಲಿ16ಸಾವು, 558 ಮಂದಿಗೆ ಸೋಂಕು

Malenadu Mirror Desk

ಸರಕಾರದ ಸೌಲಭ್ಯ ಸಾಮಾನ್ಯ ಜನರಿಗೂ ತಲುಪಲಿ: ಸಚಿವ ಮಧುಬಂಗಾರಪ್ಪ,ಜನತಾದರ್ಶನದಲ್ಲಿ ಜಿಲ್ಲೆಯ ಜನರ ಸಮಸ್ಯೆಗಳ ಅನಾವರಣ, ಸರಕಾರಿ ಬಸ್, ಹಕ್ಕುಪತ್ರ, ಗೃಹಲಕ್ಷ್ಮಿಗೇ ಹೆಚ್ಚಿನ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.