Malenadu Mitra
ರಾಜ್ಯ

ಮೊದಲು ಸುದ್ದಿಕೊಡುವ ಧಾವಂತದಲ್ಲಿ ಸತ್ಯ ಸಾಯಬಾರದು: ವಿನಾಯಕ ಭಟ್, ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆ ಸಮಾರಂಭದಲಿ ಉಪನ್ಯಾಸ

ಪತ್ರಿಕೋದ್ಯಮ ಯಾವತ್ತೂ ಸವಾಲಿನ ನಡುವೆಯೇ ಮುನ್ನಡೆಯುತ್ತಿದೆ. ಮೊದಲು ಸುದ್ದಿ ಕೊಡುವ ಧಾವಂತದಲ್ಲಿ ಸರಿಯಾದ ಸುದ್ದಿ ಕೊಡುವ ಜವಾಬ್ದಾರಿ ಪತ್ರಕರ್ತರಿಗಿರಬೇಕು ಎಂದು ಹೊಸದಿಗಂತ ಪತ್ರಿಕೆ ಸಮೂಹ ಸಂಪಾದಕ ವಿನಾಯಕ ಭಟ್ ಮೂರೂರು ಹೇಳಿದರು.
ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಪತ್ರಕರ್ತರ ಸಮಕಾಲೀನ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿದರು. ಸಿದ್ಧಾಂತ ಸಂಘರ್ಷದಲ್ಲಿ ಪತ್ರಕರ್ತರನ್ನು ಬ್ರಾಂಡ್ ಮಾಡೊ ಅಪಾಯವಿದ್ದು, ಇದರಿಂದ ಸತ್ಯ ಸಾಯುತ್ತದೆ. ಇಂದು ರಾಜಕಾರಣಿಗಳು ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಟೀಕೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಮನಸ್ಸಿಲ್ಲ. ಪತ್ರಕರ್ತರು ಒತ್ತಡ ಮತ್ತು ಬೆದರಿಕೆ ನಡುವೆ ಕೆಲಸ ಮಾಡುವ ಅನಿವಾರ್ಯತೆ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುದ್ದಿಗಳಿಗೆ ವಿಶ್ವಾಸಾರ್ಹತೆ ಇಲ್ಲ. ಮುದ್ರಣ ಮಾಧ್ಯಮ ಇಂದು ಅಲಕ್ಷ್ಯಕ್ಕೊಳಗಾಗುತ್ತಿದೆ. ಈ ಮಾಧ್ಯಮ ಸಾಮಾಜಿಕ ಮಾಧ್ಯಮಗಳನ್ನು ಅವಲಂಭಿಸಬಾರದು ಎಂದು ಸಲಹೆ ನೀಡಿದರು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್ ಯಡಗೆರೆ ಅವರು ಮಾತನಾಡಿ, ಪತ್ರಕರ್ತರಿಗೆ ಬೌದ್ದಿಕ ಸುಸ್ತಿರತೆ ,ಆರ್ಥಿಕ ಸುಸ್ತಿರತೆ ಬೇಕು. ಗ್ರಾಮೀಣ ಪತ್ರಕರ್ತರು ಸವಾಲಿನ ನಡುವೆ ಕೆಲಸ ಮಾಡುತ್ತಾರೆ. ಅವರು ಸಂಘಟಿತರಾಗಿ ಸಮಾಜಮುಖಿ ಕೆಲಸ ಕೆಲಸ ಮಾಡಬೇಕು. ನಾವು ಸಮಾಜಕ್ಕೆ ಉತ್ತರದಾಯಿಗಳಾಗಿದ್ದೇವೆ ಎಂದು ಹೇಳಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಪತ್ರಿಕಾ ಸಂಘಟನೆಗಳಲ್ಲಿ ಬರೆಯದ ಪತ್ರಕರ್ತರು ಸೇರಿಕೊಂಡು ಸಮಾಜಕ್ಕೆ , ಕೆಟ್ಟ ಸಂದೇಶ ಹೋಗ್ತಿದೆ. ಪೀತ ಪತ್ರಿಕೋದ್ಯಮ ದೂರ ಇಡಲು ನೈಜ ಪತ್ರಕರ್ತ ಸಕ್ರಿಯರಾಗಿ ಸಂಘಟನೆ ಮಾಡಲಾಗಿದೆ. ಸಜ್ಜನರು ಪೀತ ಪತ್ರಕರ್ತರಿಗೆ ಹೆದರುವ ಅಗತ್ಯ ಇಲ್ಲ. ಪತ್ರಕರ್ತರ ಟ್ರಸ್ಟ್ ಗೆ ಒಂದು ನಿವೇಶನದ ಅಗತ್ಯವಿದೆ. ಇದರಿಂಧ ಸೊರಬ ಪತ್ರಕರ್ತರ ಚಟುವಟಿಕೆಗೆ ಅನುಕೂಲ ಆಗತ್ತೆ ಎಂದರು.

ಜೆಡಿಎಸ್ ಮುಖಂಡ ಬಾಸೂರು ಚಂದ್ರೇಗೌಡ ಮಾತನಾಡಿ, ಯಾವುದೇ ಸಂಘಟನೆಗಳಿಗೆ ಸಂಖ್ಯೆ ಮುಖ್ಯ ಅಲ್ಲ. ಗುಣ ಮಟ್ಟ ಮುಖ್ಯ. ಪ್ರತಿಯೊಬ್ಬರೂ ಮನುಷ್ಯರಾಗಬೇಕು. ಅರಿತೂ ತಪ್ಪು ಮಾಡಬಾರದು ಪತ್ರಕರ್ತರು ಎಚ್ಚರ ವಹಿಸಬೇಕು
ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ರಾಘವೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ ,
ಹಂಗಿಗೆ ಒಳಗಾದ ಪತ್ರಕರ್ತರಿಂದ ಸಮಾಜಕ್ಕೆ ನ್ಯಾಯ ಒದಗಿಸಲಾಗಲ್ಲ. ಪತ್ರಕರ್ತರು ನೈಜ ವಿಮರ್ಶಕರು. ಸೊರಬ ಸಂಘ ಜನಪರವಾಗಿ ಇರಬೇಕೆಂಬ ಉದ್ದೇಶ ಹೊಂದಿದೆ. ಎಲ್ಲರ ಸಹಕಾರ ಬೇಕು ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿದರ ಜಡೆ ಸಂಸ್ಥಾನ , ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು.
ಪತ್ರಕರ್ತ ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ, ಪರಸಭೆ ಉಪಾಧ್ಯಕ್ಷ ಮಧುರಾಯ್ ಜಿ ಶೇಟ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿದರು.
ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತರಾದ ಶ್ರೀಪಾದ ಬಿಚ್ಚುಗತ್ತಿ, ಯು.ಎಂ.ನಟರಾಜ್ ಮತ್ತಿತರರು ಉಪಸ್ಥಿತರಿದ್ದರು. ದಿನಕರ ಬಾವೆ ಸ್ವಾಗತಿಸಿದರು. ನೀಲೇಶ್ ಸಮನೀ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಹೆಚ್ ಕೆ ಬಿ ಸ್ವಾಮಿ ವಂದಿಸಿದರು ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ಪ್ರದರ್ಶನ ನಡೆಯಿತು.

ಸೊರಬದಲ್ಲಿ ಕ್ರಿಯಾಶೀಲ ಪತ್ರಕರ್ತರು ಸಂಘಟಿತರಾಗಿ ಟ್ರಸ್ಟ್ ರಚಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಸಂಘಟನೆಗೆ ಅಗತ್ಯವಾದ ಬೆಂಬಲ ನೀಡಲಾಗುವುದು. ಎಲ್ಲಾ ಪತ್ರ ಪತ್ರಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವಂತಾಗಬೇಕು. ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಸೇರಿ ಕೆಲಸ ಮಾಡೋಣ
ಮಧುಬಂಗಾರಪ್ಪ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷರು.

ಮಾಧ್ಯಮ ಕ್ಷೇತ್ರ ಶ್ರೇಷ್ಠವಾದದ್ದು ಅದಕ್ಕೆ ಅನುಗುಣವಾಗಿ ಕೆಲಸ ಮಾಡುವ ಮಂದಿಗೆ ಗೌರವ ಇದೆ

ವೀರೇಶ್ ಮೇಸ್ತ್ರಿ ಪುರಸಭೆ ಅಧ್ಯಕ್ಷ

Ad Widget

Related posts

“ಹಸೆ ಚಿತ್ತಾರ”ಕ್ಕೆ ರಾಜ್ಯೋತ್ಸವದ ಗೌರವ : ಕಲಾವಿದ ಸಿರಿವಂತೆ ಚಂದ್ರಶೇಖರ್ ಗೆ ಪ್ರಶಸ್ತಿ ಘೋಷಣೆ.

Malenadu Mirror Desk

ಪುರುದಾಳಲ್ಲಿ ಕಾಡಾನೆ ದಾಳಿ, ತೋಟ ಗದ್ದೆ ನಾಶ

Malenadu Mirror Desk

ತಡರಾತ್ರಿ ಅಥವಾ ನಾಳೆ ಶಿವಮೊಗ್ಗ ಕ್ಷೇತ್ರ ಅಭ್ಯರ್ಥಿ ಘೋಷಣೆ : ಯಡಿಯೂರಪ್ಪ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.