ಶಿವಮೊಗ್ಗ,ಫೆ.೧೭: ಮಹಾಶಿವರಾತ್ರಿ ಪ್ರಯುಕ್ತ ಪುರದಾಳು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ಸ್ವಾಮಿ ಜಾತ್ರಾಮಹೋತ್ಸವ ಫೆ.೧೮ ಮತ್ತು ೧೯ ರಂದು ವಿಜೃಂಭಣೆಯಿಂದ ನಡೆಯಲಿದೆ. ಫೆ.೧೮ ರಂದು ಬೆಳಗ್ಗೆಯಿಂದ ಗಂಗಾಪೂಜೆ, ನವಗ್ರಹಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ೪ ಗಂಟೆ ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ರಾಜಬೀದಿ ರಥೋತ್ಸವ ನಡೆಯಲಿದೆ. ಭಜನೆ, ಗೌಳಿಗರ ಡೊಳ್ಳುಕುಣಿತ, ವೀರಗಾಸೆ, ಡೊಳ್ಳುಕುಣಿತ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ರಥೋತ್ಸವದಲ್ಲಿ ಪಾಲ್ಗೊಳ್ಳಲಿವೆ.
ಅದೇ ದಿನ ರಾತ್ರಿ ೯.೩೦ ರಿಂದ ಅಹೋರಾತ್ರಿ ಚಂದ್ರಹಾಸ- ಕಂಸವಧೆ ಎಂಬ ಯಕ್ಷಗಾನ ಪ್ರಸಂಗಗಳ ಪ್ರದರ್ಶನವಿದೆ. ಮಹಾಗಣಪತಿ ಯಕ್ಷ ಕಲಾಬಳಗದ ಸಂಯೋಜನೆಯಲ್ಲಿ ಪ್ರದರ್ಶನಗೊಳ್ಳುವ ಯಕ್ಷಗಾನದಲ್ಲಿ ನಾಡಿನ ಖ್ಯಾತ ಕಲಾವಿದರಾದ ಗೋಪಾಲ್ ಆಚಾರ್, ಸುಬ್ರಹ್ಮಣ್ಯ ಚಿಟ್ಟಾಣಿ, ಅಶೋಕ್ ಭಟ್ ಸಿದ್ದಾಪುರ, ಕೃಷ್ಣಮೂರ್ತಿ ಹೆಬ್ಬಿಗೆ, ನಾಗರಾಜ್ ಪಂಚಲಿಂಗ, ಸಂಜಯ್ ಬೆಳೆಯೂರು, ಶ್ರೀಧರ್ ಭಟ್ ಕಾಸರಗೋಡು, ಶ್ರೀಧರ್ ಹೆಗಡೆ ಚಪ್ಪರಮನೆ ಸೇರಿದಂತೆ ಅನೇಕ ಕಲಾವಿದರು ಪಾತ್ರ ನಿರ್ವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಶಂಕರ್ ಭಟ್, ಬ್ರಹ್ಮೂರು, ಪರಮೇಶ್ವರ್ ನಾಯ್ಕ್ ಸಿದ್ದಾಪುರ, ಅಕ್ಷಯ್ ಪ್ರಭು ಮಾಸ್ತಿಕಟ್ಟೆ, ಮಂಜುನಾಥ್, ಲಕ್ಷ್ಮೀನಾರಾಯಣ್ ಸಂಪ, ಗಣೇಶ್ ಭಟ್ ಕೆರೆಕೈ ಮೊದಲಾವರು ಭಾಗವಹಿಸಲಿದ್ದಾರೆ.
ಸಾಮೂಹಿಕ ಸತ್ತನಾರಾಯಣ ಪೂಜೆ
ಫೆ.೧೯ ರಂದು ಬೆಳಗ್ಗೆ ೧೦.೩೦ ಕ್ಕೆ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀ ಉದ್ಭವ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.