ಸಾಗರ: ನಾವು ನಮ್ಮದೆಂದು ಮಾಡುವ ಕಾರ್ಯದಲ್ಲಿ ಸತ್ಪಲ ಹೆಚ್ಚು, ಸಂಸ್ಕೃತಿ ಜಾಗೃತಿ ಮಾಡುವಲ್ಲಿ ಹಬ್ಬ ಹರಿದಿನಗಳು ಸಹಕಾರಿ ಎಂದು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಎಸ್ ರಾಮಪ್ಪ ಹೇಳಿದರು.
ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ವರ ಮಹಾಲಕ್ಷ್ಮಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನೆರೆದಿದ್ದ ಭಕ್ತರಿಗೆ ಲಕ್ಷ್ಮಿ ದೇವಿಯ ಮಹತ್ವ ಸಾರಿದರು. ವರ ಮಹಾಲಕ್ಷ್ಮಿ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ದೇವಿ ಮಂಟಪದಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇವಿಗೆ ಪ್ರಿಯವಾದ ಲಾಡು ಹಲವು ಬಗೆಯ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಒಳಿತಿಗಾಗಿ ಧರ್ಮಾಧಿಕಾರಿ ಎಸ್ ರಾಮಪ್ಪ ಪ್ರಾರ್ಥಿಸಿದರು. ಚೌಡೇಶ್ವರಿ ದೇವಿಗೆ ಚಂಡಿಕಾ ಹವನ, ದೇವಿ ಪಾರಾಯಣ
ವಿಶೇಷ ಪೂಜಾ ಕೈಂಕರ್ಯಗಳು ನೇರವೇರಿದವು. ಬೆಳಿಗ್ಗೆಯಿಂದಲೇ ಸಾವಿರಾರು ಮಂದಿ ಭಕ್ತರು ತಂಡೋಪ ತಂಡವಾಗಿ ದೇವಿ ದರ್ಶನ ಪಡೆದರು.
ಕಾರ್ಯದರ್ಶಿ ರವಿಕುಮಾರ್ ಹೆಚ್, ನಾಗರಾಜ ಕೈಸೋಡಿ, ಸಂಧ್ಯಾ ಸಿಗಂದೂರು, ವ್ಯವಸ್ಥಾಪಕ ಪ್ರಕಾಶ ಸಿಬ್ಬಂದಿಗಳು ಇದ್ದರು.
previous post