ಶಿವಮೊಗ್ಗ : ಅನೇಕ ಸುಳ್ಳುಗಳನ್ನು ಹೇಳಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನರನ್ನು ಮರಳು ಮಾಡಿದೆ. ಒಂದು ಭರವಸೆಯನ್ನು ಇಡೇರಿಸಿಲ್ಲ. ಕಾಂಗ್ರೆಸ್ ಕಾರ್ಯಕ ರ್ತರು ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬರುವ ರೀತಿಯಲ್ಲಿ ಪ್ರತಿಜ್ಞೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ೧೩೯ನೇ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನಡೆಸಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಧ್ಯೇಯ, ಪಕ್ಷ ಬೆಳೆದು ಬಂದ ರೀತಿ ಮತ್ತು ಕಾರ್ಯಕರ್ತರು ಮಾಡಬೇಕಾದ ಕಾರ್ಯಗಳ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.
ದೇಶದಲ್ಲಿ ಬಿಜೆಪಿ ಅರಾಜಕತೆ ಸೃಷ್ಟಿಸುತ್ತ ದಿನಕ್ಕೊಂದು ಹೊಸ ವಿಷಯಗಳನ್ನು ತಂದು ಜನರ ಗಮನವನ್ನು ಬೆರೆಡೆಗೆ ಸೆಳೆದು, ಲೂಟಿ ಹೊಡೆಯುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಿದ್ದಾರೆ. ೭೦ ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಧನೆಯನ್ನು ತಮ್ಮದೆಂದು ಹೇಳಿಕೊಳ್ಳುತ್ತ ಕೇವಲ ಹತ್ತು ವರ್ಷದಲ್ಲಿ ೧೪೦ ಲಕ್ಷ ಕೋಟಿ ಸಾಲವನ್ನು ಮಾಡಿದ್ದೇ ಅವರ ಸಾಧನೆ. ದೇಶ ದಿವಾಳಿಯತ್ತ ಸಾಗಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ. ನಿರುದ್ಯೋಗ ತಾಂಡವವಾಡುತ್ತಿದೆ ಎಂದರು.
ಯಾರಿಗೂ ಗೊತ್ತಿಲ್ಲದ ಆಗೆ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿ, ಲೂಟಿ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ಜಿಎಸ್.ಟಿ. ಹಣ ಸಂಗ್ರಹ ಮಾಡಿದ್ದು, ಎಲ್ಲಿಗೆ ಹೋಯಿತು. ಕರೋನ ಸಂದರ್ಭದಲ್ಲಿ ಜನರ ಪ್ರಾಣ ಉಳಿಸುವ ಔಷಧಿಗಳಲ್ಲಿ ೪೦ ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸ್ವತಹ ಬಿಜೆಪಿ ನಾಯಕ ಯತ್ನಾಕ್ ಆರೋಪಿಸಿ ದ್ದಾರೆ. ಅದು ನಿಜ ಹೌದು,ಸಾಪ್ಟ್‌ವೇರ್ ಕಂಪನಿಗಳನ್ನು ತಂದಿ ದ್ದು, ದೇಶದಲ್ಲಿ ಮೊಬೈಲ್ ತಂತ್ರ ಜ್ಞಾನ ತಂದಿದ್ದು ಬಿಜೆಪಿಯವರಲ್ಲ ರಾಜೀವ್‌ಗಾಂಧಿಯವರು ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ದೇಶದ ಎಲ್ಲಾ ಪ್ರಮುಖ ಮೀಡಿಯಾಗಳನ್ನು ಬಿಜೆಪಿ ಖರೀದಿಸಿದೆ, ಅವರ ಹುಳುಕುಗಳನ್ನು ಮುಚ್ಚಿ ಹಾಕಲು ವ್ಯವಸ್ಥಿತ ಯೋಜನೆ ಮಾಡಿದ್ದಾರೆ. ನೈಜ್ಯತೆಯನ್ನು ಅರಿತು ಬಿಜೆಪಿಯನ್ನು ಸೋಲಿಸಲು ಜನ ಸಾಮಾನ್ಯರಿಗೆ ಈ ವಿಚಾರಗಳನ್ನು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಆಯನೂರು ಮಂಜು ನಾಥ್, ಎಂ.ಶ್ರೀಕಾಂತ್, ಎನ್. ರಮೇಶ್, ಕಲಗೋಡು ರತ್ನಾಕರ್, ಹೆಚ್.ಸಿ.ಯೋಗೀಶ್, ವಿಶ್ವನಾಥ್ ಕಾಶಿ, ಯಮುನಾ ರಂಗೇಗೌಡ ಇದ್ದರು.