Malenadu Mitra
ಜಿಲ್ಲೆಶಿವಮೊಗ್ಗ

ಜ.22 ಕ್ಕೆ ಕುವೆಂಪು ವಿವಿ ಘಟಿಕೋತ್ಸವ- ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ

ಶಿವಮೊಗ್ಗ: ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ 34ನೇ ವಾರ್ಷಿಕ ಘಟಿಕೋತ್ಸವವನ್ನ ಜ.22 ರ ಬೆಳಿಗ್ಗೆ 10.30ಕ್ಕೆ ವಿವಿಯ ಬಸವ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕುವೆಂಪು ವಿವಿ ಕುಲಪತಿ ಪ್ರೊ‌.ಶರತ್ ಅನಂತಮೂರ್ತಿ, ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ಉಪಸ್ಥಿತರಿರಲಿದ್ದು, ಹೈದರಾಬಾದ್ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ ಈ ಬಾರಿ 115 ಪುರುಷರು ಹಾಗೂ 85 ಮಹಿಳೆಯರು ಸೇರಿ ಒಟ್ಟು 204 ಅಭ್ಯರ್ಥಿಗಳು ಪಿಹೆಚ್.ಡಿ ಪದವಿ ಮತ್ತು 6,872 ಪುರುಷರು ಹಾಗೂ 12,013 ಮಹಿಳೆಯರು ಸೇರಿ ಒಟ್ಟು 18,885 ವಿದ್ಯಾರ್ಥಿಗಳು ಪದವಿ ಎಂದು ತಿಳಿಸಿದರು.
ಇನ್ನು ಈ ಬಾರಿ 146 ಸ್ವರ್ಣಪದಕಗಳಿದ್ದು, 13 ಪುರುಷ ಹಾಗೂ 71 ಮಹಿಳೆಯರು ಸೇರಿ 84 ವಿದ್ಯಾರ್ಥಿಗಳು ಮತ್ತು 17 ನಗದು ಬಹುಮಾನವಿದ್ದು, 14 ವಿದ್ಯಾರ್ಥಿಗಳು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದಿಂದ ಈ ಬಾರಿ ಮೂರು ಜನರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಭೌತ ವಿಜ್ಞಾನಿ ಸಿ.ಎಸ್.ಉನ್ನಿಕೃಷ್ಣನ್ ಹಾಗೂ ಯೋಗಗುರು ಭದ್ರಾವತಿಯ ಡಿ.ನಾಗರಾಜ್ ರಿಗೆ ಗೌರವ ಡಾಕ್ಟರೇಟ್ ಘೋಷಿಸಿದ್ದು, ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.

ಇನ್ನು ಮುಖ್ಯವಾಗಿ ಎಂ.ಎ ಕನ್ನಡ ವಿಭಾಗದ ವಿದ್ಯಾರ್ಥಿ ವಸಂತ್ ಕುಮಾರ್.ಬಿ.ಜೆ ಅತೀ ಹೆಚ್ಚು 10 ಸ್ವರ್ಣ ಪದಕ ಹಾಗೂ 1 ನಗದು ಬಹುಮಾನ ಪಡೆದಿದ್ದಾರೆ. ಉಳಿದಂತೆ ಎಂ.ಎಸ್ಸಿ ಪರಿಸರ ವಿಜ್ಞಾನದಲ್ಲಿ ಸಾನಿಯಾ ಫಿರ್ದೋಸ್ 6 ಸ್ವರ್ಣ ಪದಕ ಪಡೆದಿದ್ದರೆ, ಸಮಾಜಶಾಸ್ತ್ರ ವಿಭಾಗದಲ್ಲಿ ರಕ್ಷೀತಾ ಎಸ್.ಎಸ್., ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗದಲ್ಲಿ ರಕ್ಷೀತ್.ಎಸ್., ಎಂ.ಎಸ್ಸಿ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಶುಭಶ್ರೀ.ಎಸ್., ಮತ್ತು ಬಿಕಾಂ ವಿಭಾಗದಲ್ಲಿ ಹರ್ಷಿತಾ.ಜಿ ಅವರು ತಲಾ 5 ಸ್ವರ್ಣ ಪದಕಗಳನ್ನು ಘಟಿಕೋತ್ಸವದಲ್ಲಿ ಸ್ವೀಕರಿಸಲಿದ್ದಾರೆ ಎಂದು ಕುಲಪತಿ ಶರತ್ ಅನಂತಮೂರ್ತಿ ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಕುಲಸಚಿವರಾದ ಎ.ಎಲ್.ಮಂಜುನಾಥ್, ಪ್ರೊ.ಗೋಪಿನಾಥ್ ಎಸ್.ಎಂ ಮತ್ತು ಪ್ರೊ. ಸತ್ಯಪ್ರಕಾಶ್ ಉಪಸ್ಥಿತರಿದ್ದರು.

 

Ad Widget

Related posts

ಶ್ರೀರಾಮನ ಆದರ್ಶಗಳು ಸಮಾಜಕ್ಕೆ ಮಾರ್ಗದರ್ಶನ, ಧಾರ್ಮಿಕ,ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಗಳಿಗಿಲ್ಲ ಮಹತ್ವ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Malenadu Mirror Desk

ಷೇರುದಾರರ ಸಹಕಾರದಿಂದ ಸಂಘದ ಪ್ರಗತಿ

Malenadu Mirror Desk

ಈಡಿಗ ಸಮುದಾಯದ ಹಕ್ಕೊತ್ತಾಯ ಸಮಾವೇಶ
ನ್ಯಾಯಯುತ ಬೇಡಿಕೆ ಮುಂದಿಟ್ಟುಕೊಂಡು ಈಡಿಗರ ಶಕ್ತಿಪ್ರದರ್ಶನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.