ಶಿಕಾರಿಪುರ : ಈ ಬಾರಿ ಮತ್ತೊಮ್ಮೆ ಮೋದಿ ಎಂಬ ಸಂಕಲ್ಪವನ್ನು ಶಿಕಾರಿಪುರ ಜನತೆ ಮಾಡಿದ್ದಾರೆ ಎಂದು ಸಂಸದ ರಾಘವೇಂದ್ರ ಹೇಳಿದರು. ಭಾರತೀಯ ಜನತಾ ಪಕ್ಷ ಶಿಕಾರಿಪುರ ಮಂಡಲ ಹೊಸೂರು ಮಹಾಶಕ್ತಿ ಕೇಂದ್ರ ಹಾಗೂ ಮಟ್ಟಿಕೋಟೆ ಭಾಗದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಆಯೋಜಿಸಿದ್ದ ಬೃಹತ್ “ಸಾರ್ವಜನಿಕ ಸಭೆ” ಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ಎಂಬ ಘೋಷವಾಕ್ಯದಡಿ ಸರ್ವರನ್ನು ಒಳಗೊಂಡಂತೆ ಅಂತ್ಯೋದ್ಯಯ ಪರಿಕಲ್ಪನೆಯಡಿ ಅನುಷ್ಠಾನಕ್ಕೆ ತಂದಿರುವ ಸ್ವಾತಂತ್ರ್ಯ ಭಾರತದ ನೂರಾರು ಐತಿಹಾಸಿಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಎಲ್ಲ ಯೋಜನೆಗಳ ಪ್ರತಿ ಬೂತ್ ಮಟ್ಟದಲ್ಲಿರುವ ಅರ್ಹ ಫಲಾನುಭವಿಗಳನ್ನು ಸಂಪರ್ಕಿಸಿ ಮತದಾನದ ದಿನದಂದು ಪಕ್ಷಕ್ಕೆ ಹೆಚ್ಚಿನ ಬಲ ತರುವಂತೆ ಕಾರ್ಯಕರ್ತರಿಗೆ ಕಾರ್ಯನಿರ್ವಹಿಸಬೇಕು ಎಂದು ಕೇಳಿಕೊಂಡರು.
ನನ್ನ ಲೋಕಸಭಾ ಅವಧಿಯಲ್ಲಿ ಕೇಂದ್ರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜಾರಿಗೊಳಿಸಿರುವ ಯೋಜನೆಗಳ ಕುರಿತು ಪ್ರಸ್ತಾಪಿಸಿ ಬರುವ ಮೇ 7 ರಂದು ಕಮಲದ ಗುರುತಿನ ಕ್ರ.ಸಂಖ್ಯೆ 2ಕ್ಕೆ ತಮ್ಮ ಅತ್ಯಮೂಲ್ಯ ಮತವನ್ನು ನೀಡಿ ಅತ್ಯಧಿಕ ಮತಗಳ ಅಂತರದಿಂದ ವಿಜಯಮಾಲೆಯನ್ನು ಧರಿಸಲು ಸಹಕಾರ ನೀಡುವಂತೆ ಮನವಿ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿ, ಅತೀ ಹೆಚ್ಚು ಮತಗಳ ಅಂತರದಿಂದ ರಾಘವೇಂದ್ರರನ್ನು ಗೆಲ್ಲಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರುಮೂರ್ತಿ ಅವರು, ಅಶೋಕ್ ನಾಯಕ್ ಅವರು, ಹನುಮಂತಪ್ಪ ಅವರು, ಗುರುರಾಜ್ ಅವರು, ಶಿವಪ್ಪ ಅವರು ಅವರು, ಭೂಕಾಂತ್ ಅವರು, ರುದ್ರೇಶ್ ಅವರು ಸೇರಿದಂತೆ ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.