ಒಂದು ಮಾರಿ ಕಡಿಮೆ ಆಯ್ತು ಎನ್ನುವಾಗಲೇ ಬ್ರಿಟನ್‌ನಿಂದ ಇನ್ನೊಂದು ಮಾರಿ ಬಂದಿದೆ. ಆದರೆ ಈ ಎಲ್ಲ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವು ಕೊರೊನ ವಾರಿರ‍್ಸ್ಗೆ ನಾವೆಲ್ಲ ನೈತಿಕ ಬೆಂಬಲ ನೀಡಬೇಕು ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸರ್ವಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ನೌಕರರ ಸಂಘವು ಕೊರೊನ ವಾರಿರ‍್ಸ್ಗೆ ಸನ್ಮಾನ ಮಾಡುತ್ತಿರುವುದು ಸ್ಮರಣೀಯವಾದ ಕಾರ್ಯಕ್ರಮ. ದೇಶದಲ್ಲಿ ಒಂದು ಮಾದರಿಯ ಕೊರೊನ ಕಡಿಮೆಯಾಯಿತು. ಎನ್ನುವಾಗಲೇ ಬ್ರಿಟನ್‌ನಿಂದ ಮತ್ತೊಂದು ಬಂದಿದೆ. ಈ ಎಲ್ಲ ಸಮಸ್ಯೆಗಳನ್ನು ನಿರ್ವಹಿಸಲು ಸರಕಾರ ಸಿದ್ದವಿದೆ. ಸರಕಾರಿ ನೌಕರರ ಶ್ರಮ ಎಲ್ಲ ಕಾಲಕ್ಕಿಂತಲೂ ಈಗ ಹೆಚ್ಚಿದೆ. ಅವರಿಗೆ ನಾವು ನೈತಿಕ ಬೆಂಬಲ ನೀಡಬೇಕು ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ಅವರು ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ನೌಕರರ ಅದರಲ್ಲೂ ಆರೋಗ್ಯ ಇಲಾಖೆಯವರ ಸೇವೆ ಸ್ಮರಿಸಿದರು. ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್ ವೈಶಾಲಿ ,ಎಸ್ಪಿ ಶಾಂತರಾಜ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಮತ್ತಿತರರಿದ್ದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಹಿರಿಯ ಪದಾಧಿಕಾರಿಗಳು ಮತ್ತು ಕೊರೊನ ವಾರಿರ‍್ಸ್ ಅನ್ನು ಸನ್ಮಾನಿಸಲಾಯಿತು.
previous post
next post