ಶಿವಮೊಗ್ಗ. ಜ.೨: ಮುಖ್ಯಮಂತ್ರಿ ತವರು ಕ್ಷೇತ್ರ ಶಿಕಾರಿಪುರ ದಲ್ಲಿ ಯುವಕನೊಬ್ಬನ ಹತ್ಯೆ ನಡೆದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹಿಂದೂ ಯುವಕನ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆ ಗಳು ಪ್ರತಿಭಟನೆ ನಡೆಸಲು ಸಜ್ಜಾಗುತ್ತಿರುವ ಕಾರಣದಿಂದ ಪಟ್ಟಣಕ್ಕೆ ಹೆಚ್ಚುವರಿ ಪೋಲಿಸ್ ಪಡೆಯನ್ನು ಕರೆಸಿಕೊಳ್ಳಲಾಗಿದೆ.
ಪಟ್ಟಣದ ಆಶ್ರಯ ಬಡಾವಣೆಯ ಗಾರೆ ಕೆಲಸದ ಮನೋಜ್ (೨೨) ಮೊನ್ನೆ ರಾತ್ರಿ ತನ್ನ ಮನೆಯಲ್ಲಿ ಹೊಸ ವರ್ಷದ ಆಚರಣೆ ನಿಮಿತ್ತವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದ.
ಈ ಸಂದರ್ಭದಲ್ಲಿ ಸೆರೆಮನೆಯಲ್ಲಿ ರುವ ಇಸ್ಸಾಕ್ ಎಂಬಾತ ವಿನಾಕಾರಣ ಮನೋಜ್ ನೊಂದಿಗೆ ಜಗಳ ಮಾಡಿದ್ದನು.
ಇದೇ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ತನ್ನ ಸ್ನೇಹಿತ ನೌಶಾದ್ ಜೊತೆ ಸೇರಿ ಕೊಂಡು ಮನೋಜ್ ನನ್ನು ಚಾಕುವಿನಿಂದ ಇರಿದು ಸಾಯಿಸಿದ್ದಾನೆ.
ಪೋಲಿಸರು ಆರೋಪಿ ಇಸ್ಸಾಕ್ ನನ್ನು ಬಂಧಿಸಿದ್ದು ಮತ್ತೋರ್ವ ಆರೋಪಿ ನೌಶಾದ್ ಪರಾರಿಯಾಗಿದ್ದಾನೆ.
ಎಸ್ಪಿ ಶಾಂತರಾಜು ಮತ್ತು ಹೆಚ್ಚುವರಿ ಎಸ್ ಪಿ ಶೇಖರ್ ಅವರುಗಳು ಶಿಕಾರಿಪುರ ಕ್ಕೆ ದೌಡಾಯಿಸಿದ್ದಾರೆ.
previous post
next post