Malenadu Mitra
ರಾಜ್ಯಶಿವಮೊಗ್ಗ

ಬಿಜೆಪಿ ಸಭೆ ಭದ್ರತೆಯಲ್ಲಿದ್ದ ಪೇದೆ ಸಾವು

ಬಿಜೆಪಿ ವಿಶೇಷ ಸಭೆಗೆ ಬಂದೋಬಸ್ತ್‍ಗೆ ಬಂದಿದ್ದ ಪೇದೆ ಜುಲ್ಫೀಕರ್(40) ಅವರು ರಸ್ತೆ ಅಪಘಾತದಲ್ಲಿ ಸಾವೀಗೀಡಾಗಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಿದ್ದು, ಪರೀಕ್ಷಿಸಿದ ವೈದ್ಯರು ಅವರು ಸಾವಿಗೀಡಾಗಿರುವುದಾಗಿ ಹೇಳಿದರು.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಕರ್ತವ್ಯ ನಿರತ ಪೇದೆ ಸಾವಿಗೆ ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.ರಾತ್ರಿ ಒಂಬತ್ತೂ ಮುಕ್ಕಾಲಿಗೆ ಐಷರಾಮಿ ಹರ್ಷ ಹೋಟೆಲ್ ಮುಂಭಾಗ ಭದ್ರತಾ ಕರ್ತವ್ಯದಲ್ಲಿದ್ದ ಪೇದೆ ಜುಲ್ಫೀಕರ್ ಎನ್ನುವರು ಬಿ.ಎಚ್.ರಸ್ತೆ ದಾಟುವಾಗ ಸಾಗರ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದ ಕಾರು ಏಕಾಏಕಿ ಡಿಕ್ಕಿಯಾಗಿದ್ದರಿಂದ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹರ್ಷ ಹೋಟೆಲ್ ರಾಜ್ಯದ ವಿವಿಧ ಕಡೆಯಿಂದ ಗಣ್ಯಮಾನ್ಯರು ಉಳಿದುಕೊಂಡಿದ್ದರಿಂದ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇದೇ ಹೋಟೆಲ್ ಸಮೀಪ ಡೂಟಿ ಮಾಡುತ್ತಿದ್ದ ಜುಲ್ಫೀಕರ್ ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ತಕ್ಷಣ ಅಲ್ಲಿದ್ದ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಅಪಘಾತದ ರಭಸಕ್ಕೆ ಕಾರಿನ ಮುಂಭಾಗದ ಗಾಜು ಒಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ

Ad Widget

Related posts

ಮುಸ್ಲಿಂ ಬಂಧುಗಳನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುತ್ತೇವೆ :ಯಡಿಯೂರಪ್ಪ

Malenadu Mirror Desk

ಊರಿನ ಹಿತದೃಷ್ಟಿಯಿಂದ ಸೊರಬ ರಸ್ತೆ ಅಗಲೀಕರಣ:ಶಾಸಕ ಎಚ್.ಹಾಲಪ್ಪ ಹರತಾಳು

Malenadu Mirror Desk

ಕೋವಿಡ್ ನಿಂದ ಮೃತಪಟ್ಟವರಿಗೆ ಕಾಂಗ್ರೆಸ್ ಸಹಾಯ ಹಸ್ತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.