ಗ್ರಾಮಪಂಚಾಯಿತಿಯಲ್ಲಿ ಏನು ಕೆಲಸವಾಗಬೇಕೆಂಬುದನ್ನು ಪಟ್ಟಿ ಮಾಡಿ ಕೊಡಿ ಆದ್ಯತೆಯ ಮೇರೆಗೆ ನಿಮ್ಮ ಎಲ್ಲ ಕೆಲಸಗಳನ್ನು ಸರಕಾರ ಮಾಡಿಕೊಡಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ಬುಧವಾರ ನಡೆದ ಜನಸೇವಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿಗಳಿಗೆ ಇನ್ನು ಮುಂದೆ ಜನ ಸಂಖ್ಯೆ ಆಧರಿಸಿ ಅನುದಾನ ನೀಡಲಾಗುವುದು. ಸ್ಥಳೀಯ ಆಡಳಿತವನ್ನು ಸಶಕ್ತಗೊಳಿಸಲು ಸರಕಾರ ಸಿದ್ಧವಿದೆ. ಈ ಕಾರಣದಿಂದ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳಿಗೆ ಸೋಲಾರ್ ಅಳವಡಿಸಲಾಗುವುದು. ಸ್ಥಳೀಯ ಆದಾಯವನ್ನು ಅಲ್ಲಿಗೇ ಬಳಸುವ ಕ್ರಿಯಾಯೋಜನೆಯನ್ನು ಸರಕಾರ ಹೊಂದಿದೆ. ನಿಮ್ಮ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು ಜನ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ ಎಂದು ನೂತನ ಪಂಚಾಯಿತಿ ಸದಸ್ಯರಿಗೆ ಈಶ್ವರಪ್ಪ ಕರೆ ನೀಡಿದರು.
ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ರಾಘವೇಂದ್ರ, ಶೋಭಾ ಕರಂದ್ಲಾಜೆ. ಶಾಸಕರಾದ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ, ಕೆ.ಬಿ.ಅಶೊಕನಾಐಕ, ಮೇಲ್ಮನೆ ಸದಸ್ಯ ರವಿಕುಮಾರ್, ಜಿಲಾಧ್ಯಕ್ಷ ಟಿ.ಡಿ.ಮೇಘರಾಜ್ ಮತ್ತಿತರರು ಹಾಜರಿದ್ದರು.
previous post
next post