Malenadu Mitra
ರಾಜಕೀಯ ರಾಜ್ಯ ಶಿವಮೊಗ್ಗ

ರಾಜಧಾನಿಯಲ್ಲಿ ಮೊಳಗಿದ ಕುರುಬರ ಕಹಳೆ

ಕುರುಬ ಸಮುದಾಯವನ್ನು ಎಸ್ಟಿ ಗೆ ಸೇರಿಸಬೇಕೆಂಬ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಜನಸಾಗರವೇ ಹರಿದು ಬಂದಿದೆ. ಬೆಂಗಳೂರಿನ ಹೊರವಲಯದ ಮಾದಾವರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕುರುಬ ಸಮುದಾಯದ ಮುಖಂಡರು ತಮ್ಮ ಒಗ್ಗಟ್ಟು ಪ್ರದರ್ಶನಕ್ಕೆ ಈ ವೇದಿಕೆ ಬಳಿಸಿಕೊಂಡರು.ಕುರುಬ ಸಮುದಾಯದ ಪ್ರಶ್ನಾತೀತ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿರೀಕ್ಷೆಯಂತೆ ಸಮಾವೇಶಕ್ಕೆ ಗೈರಾಗಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರಕಾರವೇ ಇರುವುದರಿಂರ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿರುವುದು ಯಾರ ವಿರುದ್ಧ ಎಂಬ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದ ಸಿದ್ದರಾಂಯ್ಯ ಅವರು ಸಮಾವೇಶಕ್ಕೆ ಬಂದಿರಲಿಲ್ಲ.

ಎಸ್ಟಿ ಮೀಸಲು ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಕುರುಬ ಸಮಾಜದ ಜನರು ಆಗಮಿಸಿ ಸರಕಾರದ ಮೇಲೆ ಒತ್ತಡ ಹಾಕಿದರು. ಈ ಸಂದರ್ಭ ಸರಕಾರದ ಪ್ರತಿನಿಧಿಯಾಗಿ ಬಂದಿದ್ದ ಕಂದಾಯ ಸಚಿವ ಆರ್. ಅಶೋಕ್ ಮನವಿ ಪತ್ರ ಪಡೆದರು. ಕಾಗಿನೆಲೆ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ಸೇರಿದಂತೆ ಕುರುಬ ಸಮಾಜದ ಹಲವು ಮಠಾಧೀಶರು, ಸಚಿವರಾದ ಕೆ.ಎಸ್.ಈಶ್ವರಪ್ಪ, ಶಂಕರ್, ಎಂ.ಟಿ.ಬಿ.ನಾಗರಾಜ್, ಶಾಸಕರಾದ ಬಂಡೆಪ್ಪ ಕಾಂಶಂಪೂರ್, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ರಘುನಾಥ ಮಲ್ಕಾಪುರೆ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಎಂ.ಶ್ರೀಕಾಂತ್, ಕೆ.ಇ.ಕಾಂತೇಶ್ಸೇರಿದಂತೆ ಅನೇಕ ನಾಯಕರು ವೇದಿಕೆಯಲ್ಲಿದ್ದರು.

Ad Widget

Related posts

ನ್ಯಾಯಾಲಯದ ಆದೇಶ ಪಾಲಸುತ್ತೇವೆ :ಆಡಳಿತಮಂಡಳಿ ಹಿಜಾಬ್ ತೆಗೆಯುವುದಿಲ್ಲ, ಬೇಕಿದ್ದರೆ ವಿಷ ಕುಡಿತೇವೆ: ವಿದ್ಯಾರ್ಥಿನಿಯರು

Malenadu Mirror Desk

ಹರತಾಳು ಹಾಲಪ್ಪರಿಗೆ ಸಚಿವ ಸ್ಥಾನ: ಮುಳುಗಡೆ ಸಂತ್ರಸ್ತರ ಒತ್ತಾಯ

Malenadu Mirror Desk

ವಿಜಯೇಂದ್ರ ವಿರುದ್ಧ ಸಿ.ಟಿ. ರವಿಯ ಅಸಮಾಧಾನ ಏನು?
ಅಂದು ಬಿಬಿ ಶಿವಪ್ಪ, ಯತ್ನಾಳ್, ಈಗ ಸೋಮಣ್ಣ ಬಂಡೆದ್ದಿದ್ದರ ಹಿನ್ನೆಲೆ ಏನು ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.