ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಬದುಕು ಬರಹ ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿ ನೀಡುವಂತಿದ್ದು, ಮಕ್ಕಳು ಅವರ ಸಾಹಿತ್ಯ ಓದಬೇಕು ಎಂದು ಶಿಕಾರಿಪುರ ತಾಲೂಕು ಈಸೂರು ಸರಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರವೀಣ ಮಹಿಷಿ ಹೇಳಿದರು.
ಕಾಲೇಜಿನಲಿ ಆಯೋಜಿಸಿದ್ದ ಜಿ.ಎಸ್.ಎಸ್ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿವರುದ್ರಪ್ಪ ಅವರಂತಹ ಮಹಾನ್ ಕವಿ ಜನ್ಮವೆತ್ತ ಊರಿನಲ್ಲಿ ನಾವೆಲ್ಲ ಕರ್ತವ್ಯ ನಿರ್ವಹಿಸುವುದೇ ಒಂದು ಧನ್ಯತಾ ಭಾವ. ಅವರ ಸಾಹಿತ್ಯದಲ್ಲಿನ ಜೀವನ ಮೌಲ್ಯಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಉಪನ್ಯಾಸಕ ಎನ್.ಜಿ.ಗಂಗಪ್ಪ ಶಿವರುದ್ರಪ್ಪ ಅವರ ಬದುಕು ಬರಹ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಥಮ,ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.
previous post
next post