ತುಮಕೂರಿನ ವಿದ್ಯಾವಾಚಸ್ಪತಿ ಡಾ.ಕವಿತಾ ಕೃಷ್ಣ ಸಾಹಿತ್ಯ ಪ್ರಶಸ್ತಿಗೆ ಮಕ್ಕಳ ಸಾಹಿತಿ ಶಿಕ್ಷಕ ರವಿರಾಜ್ ಮಂಡಗಳಲೆ ಅವರ ನಮ್ಮೂರ ಜಾನಪದ ಅನುಸಂಧಾನ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ. ರವಿರಾಜ್ ಅವರು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿ ಮಲ್ಕಾಪುರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ.
ಈ ಕೃತಿಯು ಈ ಹಿಂದೆ ಇಂಡಿಯಾ ಪೌಂಡೇಶನ್ ಫಾರ್ ದಿ ಆರ್ಟ್ಸ್ ಬೆಂಗಳೂರು ಸಂಸ್ಥೆ ಹಾಗೂ ಡಿಎಸ್ಇಆರ್ಟಿ ಬೆಂಗಳೂರು ಸಹಯೋಗದ ಕಲಿ ಕಲಿಸು ಕಲಾಂರ್ಗತ ಬೋಧನಾ ಪ್ರಯೋಗದ ಭಾಗವಾಗಿ ಮಲ್ಕಾಪುರ ಶಾಲೆಯ ಶಿಕ್ಷಕರ ಸಾಹಿತ್ಯ ರವಿಚಂದ್ರ (ರವಿರಾಜ್ ಸಾಗರ್ ) ಹಮ್ಮಿಕೊಂಡಿದ್ದ ಜಾನಪದ ಜ್ಞಾನ-ಪರಂಪರೆಯ ಪುನರುಜ್ಜೀವನಕ್ಕಾಗಿ ಶಾಲಾ ಮಕ್ಕಳಿಂದ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಜಾನಪದ ಕ್ಷೇತ್ರ ಅಧ್ಯಯನ ಪ್ರಯೋಗದ ಫಲಶ್ರುತಿಯಾಗಿ 2019 ರಲ್ಲಿ ಪ್ರಕಟವಾಗಿತ್ತು.
1 comment
Tq sir