ಶಿಕಾರಿಪುರ ತಾಲೂಕು ಕಾಳೇನಹಳ್ಳಿಯ ಶಿವಯೋಗ ಮಂದಿರದ ಶ್ರೀ ಮ.ಮಿ.ಪ್ರ ರೇವಣಸಿದ್ದ ಸ್ವಾಮೀಜಿ ಮಂಗಳವಾರ ಲಿಂಗೈಕ್ಯರಾಗಿದ್ದಾರೆ.
ವೀರಶೈವ ಮಹಾಸಭಾದ ರೂವಾರಿಗಳೊಬ್ಬರಾಗಿದ್ದ ಶ್ರೀಗಳು ೧೯೭೭ ರಲ್ಲಿ ಪಟ್ಟಾಧಿಕಾರ ವಹಿಸಿಕೊಂಡು ೪೪ ವರ್ಷಗಳ ಕಾಲ ಮಠವನ್ನು ನಡೆಸಿದ್ದರು. ಈ ಅವಧಿಯಲ್ಲಿ ಅವರು ಅನೇಕ ಸಮಾಜ ಪರಿವರ್ತನ ಹಾಗೂ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಶ್ರೀಗಳನ್ನು ಶಿಕಾರಿಪುರದ ಭಕ್ತರು ನಡೆದಾಡುವ ದೇವರೆಂದೇ ಹೇಳುತ್ತಿದ್ದರು ಮತ್ತು ಭಕ್ತಿಭಾವದಿಂದ ನಡೆದುಕೊಳ್ಳುತ್ತಿದ್ದರು.
ಮುಖ್ಯಮಂತ್ರಿ ಸಂತಾಪ:
ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಶ್ರೀಗಳು ಸಮಾಜಕ್ಕೆ ದೊಡ್ಡ ಮಾರ್ಗದರ್ಶಕರಾಗಿದ್ದರು. ಅವರು ಮಾಡಿದ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಮಾದರಿ ಎಂದು ಸ್ಮರಿಸಿದ್ದಾರೆ.