Malenadu Mitra
ರಾಜ್ಯ ಶಿವಮೊಗ್ಗ

ಟವರ‍್ರೇ ಇಲ್ಲ , ಆನ್ ಲೈನ್ ಕ್ಲಾಸ್ ಎಲ್ಲಿ ?

ಮಲೆನಾಡಿನಲ್ಲಿ ಮಕ್ಕಳ ಶಿಕ್ಷಣದ ಉದ್ದೇಶದಿಂದ ಮೊಬೈಲ್ ಟವರ್‌ಗಳ ನಿರ್ಮಾಣಕ್ಕೆ ರಾಜ್ಯಸರಕಾರವೇ ಅನುದಾನ ನೀಡಬೇಕೆಂದು sಸಾಗರ ಶಾಸಕ ಹರತಾಳು ಹಾಲಪ್ಪ ಆಗ್ರಹಿಸಿದರು.
ವಿಧಾನ ಮಂಡಳ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು, ಮಲೆನಾಡಿನ ಸಾಗರ ಹೊಸನಗರ ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಮೊಬೈಲ್ ಟವರ್‌ಗಳಿಲ್ಲ. ಇದರಿಂದ ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಕೊರೊನ ಕಾರಣದಿಂದ ಶಾಲೆಯೂ ಇಲ್ಲ, ಆನ್ ಲೈನ್ ಕ್ಲಾಸ್ ಕೇಳಲು ಮೊಬೈಲ್ ಸಿಗ್ನಲ್ ಇಲ್ಲ. ಅಧಿಕಾರಿಗಳನ್ನು ಕೇಳಿದರೆ, ಕೇಂದ್ರ ಸರಕಾರ ಮಾಡಬೇಕೆನ್ನುತ್ತಾರೆ. ಅಲ್ಲೀತನಕ ಕಾಯುತ್ತಾ ಕುಳಿತರೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ರಾಜ್ಯಸರಕಾರವೇ ಪರಿಹಾರ ಕಂಡುಹಿಡಿಯಬೇಕು. ಪಡಿತರ ವಿತರಣೆಗೂ ಪಂಚಿಂಗ್ ಸಿಸ್ಟಮ್ ಇರುವುರಿಂದ ಬಡವರಿಗೆ ಪಡಿತರ ಪಡೆಯಲೂ ಸಮಸ್ಯೆಯಾಗಿದೆ ಎಂದು ಸದನದ ಗಮನ ಸೆಳೆದರು.
ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ ಅವರು, ನನ್ನ ಕ್ಷೇತ್ರದಲ್ಲಿಯೂ ಈ ಸಮಸ್ಯೆ ಇದೆ. ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದರು.

ಸರಕಾರದ ಪರವಾಗಿ ಉತ್ತರ ನೀಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಹಾಲಪ್ಪ ಅವರ ಪ್ರಶ್ನೆ ಸರಿಯಾಗಿದೆ. ಸರಕಾರಕ್ಕೂ ಈ ಬಗ್ಗೆ ಕಳಕಳಿ ಇದೆ. ಮಲೆನಾಡು ಭಾಗದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಸಂಬಂಧಿತ ಸಚಿವಾಲಯಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ. ಈಗ ರಾಜ್ಯ ಸರಕಾರ ಏನು ಮಾಡಬಹುದೆಂಬ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದರು.

Ad Widget

Related posts

ವಾಹನ ಜಖಂ: ಇಬ್ಬರು ಆರೋಪಿಗಳ ಬಂಧನ

Malenadu Mirror Desk

ರಾಮಮಂದಿರ ಏಕತೆಯ ಪ್ರತೀಕ:ಬೆಕ್ಕಿನ ಕಲ್ಮಠ ಶ್ರೀ

Malenadu Mirror Desk

ಕಾಂಗ್ರೆಸ್ ಲಸಿಕಾ ಜಾಗೃತಿ ಅಭಿಯಾನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.