ಅಲ್ಲಿ ಮುದ್ದಾದ ಮರಿ ಜನಿಸಿದೆ, ತಾಯಿ ಮಾತ್ರವಲ್ಲದೆ ಅದರ ಪೊರೆವ ಮಾವುತರ ಸಂಭ್ರಮ ಹೇಳತೀರದು. ಬಿಡಾರ ತುಂಬಾ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ನಡೆದಾಡುವ ಆನೆ ಮರಿ ಬಿಡಾರಕ್ಕೆ ಬಂದು ಎರಡು ದಿನಗಳಾಗಿವೆ.
ಹೌದು ಸಕ್ರೆಬೈಲ್ ಆನೆಬಿಡಾರದಲ್ಲೀಗ ಹೆರಿಗೆ ಸಂಭ್ರಮ 32 ರ ಪ್ರಾಯದ ಭಾನುಮತಿ ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿದೆ. 2014 ರಲ್ಲಿ ಹಾಸನ ಸಮೀಪದ ಸೆರೆಯಾಗಿದ್ದ ಕಾಡಾನೆ ಸಕ್ರೆಬೈಲಿಗೆ ಬಂದು ಭಾನುಮತಿಯಾಗಿದ್ದಳು. ಇಲ್ಲಿನ ಮಾವುತರು ಹಾಗೂ ವನ್ಯಜೀವಿ ವೈದ್ಯ ಡಾ.ವಿನಯ್ ಆರೈಕೆಯಲ್ಲಿ ಇದ್ದ ಭಾನುಮತಿ ಹೆಣ್ಣುಮರಿಗೆ ಜನ್ಮ ನೀಡಿದೆ. ಈ ಹೊಸ ಅತಿಥಿಯ ಆಗಮನದಿಂದ ಸಕ್ರೆಬೈಲಿನಲ್ಲಿ ಮರಿಯಾನೆಯ ಕಲರವ ಜೋರಾಗಿಯೇ ಇದೆ. ಭಾನುಮತಿ ಈವರೆಗೆ ಮೂರು ಮರಿಗಳಿಗೆ ಜನ್ಮ ನೀಡಿದೆ.
previous post
next post