ಸ್ವಾತಂತ್ರ್ಯಹೋರಾಟಗಾರ ಡಾ.ಹೆಚ್.ಗಣಪತಿಯಪ್ಪ ಸೇವಾಟ್ರಸ್ಟ್ ,ಸಾಗರ ತಾಲೂಕು ರೈತ ಸಂಘದ ಆಶ್ರಯದಲ್ಲಿ ಏಪ್ರಿಲ್ ೧೮ ರಂದು ಡಾ.ಹೆಚ್.ಗಣಪತಿಯಪ್ಪ ನೇಗಿಲ ಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಾಗೋಡು ಚಳವಳಿ ೭೦ ನೆನಪು ಮತ್ತು ಟ್ರಸ್ಟ್ನ ದಶಮಾನೋತ್ಸವ ನಿಮಿತ್ತ ನೀಡುತ್ತಿರುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮಂಡಗಳಲೆಯ ದೊಡ್ಡೇರಿ ಈರಪ್ಪ ಅವರಿಗೆ ಘೋಷಿಸಲಾಗಿದೆ. ಸಾಗರದ ಶೃಂಗೇರಿ ಮಠದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೈತ ನಾಯಕ ಕೆ.ಟಿ.ಗಂಗಾಧರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹೋರಾಟದ ಈ ಹೊತ್ತಿನ ಆತಂಕಗಳು ವಿಷಯ ಕುರಿತು ಡಾ.ಮೋಹನ್ ಚಂದ್ರಗುತ್ತಿ ಮಾತನಾಡಲಿದ್ದಾರೆ.
ಟ್ರಸ್ಟ್ನ ಅಧ್ಯಕ್ಷರಾದ ಉಮೇಶ್ ಹಿರೇನೆಲ್ಲೂರು ಅಧ್ಯಕ್ಷತೆ ವಹಿಸುವರು. ವೇದಿಕೆಯಲ್ಲಿ ಶಾರದಾಮಠದ ಧರ್ಮದರ್ಶಿ ಅಶ್ವಿನ್‌ಕುಮಾರ್, ಪತ್ರಕರ್ತ ಜಿ.ನಾಗೇಶ್, ರಾಜೇಂದ್ರ ಆವಿನಹಳ್ಳಿ, ಜಿಲ್ಲಾ ಕನ್ನಡ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಸಾಹಿತಿ ಪರಮೇಶ್ವರ ಕರೂರು, ರೈತಮುಖಂಡರಾದ ದಿನೇಶ್ ಶಿರವಾಳ,ಅಮೃತ್ ರಾಜ್ ತ್ಯಾಗರ್ತಿ ಮತ್ತಿತರರು ಭಾಗವಹಿಸುವರು.
previous post