ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತು ಮೆಗ್ಗಾನ್ ಆಸ್ಪತ್ರೆ ಯಲ್ಲಿ ಆಕ್ಸಿಜನ್, ವೆಂಟಿ ಲೇಟರ್ ಕೊರತೆ ಇಲ್ಲ. ಎಲ್ಲವೂ ಸಮ ರ್ಪಕವಾಗಿದೆ. ಯಾವುದೇ ಸುಳ್ಳು ವಿಷಯಗಳಿಗೆ ಜನ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶುಕ್ರವಾರ ಸುದ್ಧಿಗಾರ ರೊಂದಿಗೆ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಬೆಡ್‌ಗಳಿಲ್ಲ ಎಂದು ಬೋರ್ಡ್ ಹಾಕಿದ್ದು ನಿಜ. ಆದರೆ, ಬೋರ್ಡ್ ಹಾಕಿದ ಮೇಲೂ ೧೦೦ ಬೆಡ್‌ಗಳ ವ್ಯವಸ್ಥೆ ಮಾಡಲಾ ಗಿದೆ. ಕಾರಣ ಮೊನ್ನೆ ೭೭೨ ಕೋವಿಡ್ ಸೋಂಕಿತರು ಇದ್ದರೆ ಅದು ನಿನ್ನೆ ೪೪೪ ಕ್ಕೆ ಇಳಿದಿದೆ. ಕಾರಣ ಬೋರ್ಡ್ ಹಾಕಿದ್ದರಿಂದ ದೂರದ ಬೇರೆ ಬೇರೆ ಜಿಲ್ಲೆಗಳ ಜನರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬರುವುದನ್ನು ತಡೆಯಲು ಸಹಾಯಕವಾಗಿದೆ ಎಂದು ಈಶ್ವರಪ್ಪ ಸಮರ್ಥಿಸಿಕೊಂಡರು.
ಕೆಲವು ಪತ್ರಿಕೆಗಳಲ್ಲಿ ಆಕ್ಸಿಜನ್ ಇಲ್ಲ. ಹಾಹಾಕಾರ ಉಂಟಾಗಿದೆ ಎಂಬೆಲ್ಲಾ ಸುದ್ದಿಗಳು ಬರುತ್ತಿವೆ. ಆದರೆ, ಜಿಲ್ಲೆ ಯಲ್ಲಿ ಅಂತಹ ಸಂದರ್ಭ ಬಂದಿಲ್ಲ. ಆಕ್ಸಿಜನ್ ಕೊರತೆಯೂ ಇಲ್ಲ. ಭದ್ರಾ ವತಿಯಲ್ಲಿ ಈಗಾಗಲೇ ಆಕ್ಸಿಜನ್ ಪ್ಲಾಂಟ್ ರೆಡಿ ಇದ್ದು, ಆಮ್ಲಜನಕ ಕೊರತೆಯನ್ನು ನೀಗಿಸುತ್ತದೆ. ಇದುವರೆಗೂ ಆಕ್ಸಿಜನ್ ಇಲ್ಲದೇ ಒಬ್ಬನೇ ಒಬ್ಬ ವ್ಯಕ್ತಿ ಮೃತಪಟ್ಟಿಲ್ಲ ಎಂದು ಹೇಳಿಕದರು.
ದೂರದ ಊರುಗಳ ರೋಗಿ ಗಳ ಸಂಖ್ಯೆ ತಡೆಯಲು ಕೆಲವು ಕ್ರಮ ಅನುಸರಿಸಬೇಕಾ ಗುತ್ತದೆ. ಬೇರೆ ದೂರದ ಜಿಲ್ಲೆಗಳಿಂದ ಬರುವವರು ಇಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದರೆ ನಿರಾಸೆ ಹೊಂದುತ್ತಾರೆ. ಆ ಕಾರಣದಿಂದ ಕೆಲವು ಸಲ ಮ್ಯಾನೇಜ್ ಮಾಡುವ ದೃಷ್ಠಿ ಯಿಂದ ಬೆಡ್ ಇಲ್ಲ ಎಂದು ಹೇಳಿದ್ದೇವೆ ಅಷ್ಟೆ ಎಂದರು.
.
previous post
next post