ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಕೊರೊನ ಸೋಂಕಿಗೆ ತುತ್ತಾಗಿ 14ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ 540 ಮಂದಿಗೆ ಸೋಂಕು ತಗುಲಿದ್ದು,462 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 465ಕ್ಕೆ ಏರಿದೆ. ಶುಕ್ರವಾರ ಶಿವಮೊಗ್ಗ ತಾಲೂಕಿನಲ್ಲಿ 212 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 34 ಶಿಕಾರಿಪುರ 47ತೀರ್ಥಹಳ್ಳಿಯಲ್ಲಿ 15ಸೊರಬ 93, ಸಾಗರ 15, ಹೊಸನಗರ104 ಹಾಗೂ ಇತರೆ ಜಿಲ್ಲೆಗಳ 15 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ. 26 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 4201 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


