Malenadu Mitra
ರಾಜ್ಯ ಶಿವಮೊಗ್ಗ

ಎಚ್.ಎಂ ಟ್ರಸ್ಟ್ ನಿಂದ ಎಲ್ಲಾ ವಾರ್ಡುಗಳಲ್ಲಿ ಆಕ್ಸಿಮೀಟರ್

ಶಿವಮೊಗ್ಗ ಮಹಾನಗರಪಾಲಿಕೆ ಸದಸ್ಯ ಎಚ್.ಎಂ.ಯೋಗಿಶ್ ಅವರ ಕುಟುಂಬದ ಎಚ್.ಎಂ.ಟ್ರಸ್ಟ್ ವತಿಯಿಂದ ಶಿವಮೊಗ್ಗ ನಗರದ ಎಲ್ಲಾ ವಾರ್ಡುಗಳಲ್ಲಿ ಸಾರ್ವಜನಿಕರು ಉಪಯೋಗಕ್ಕಾಗಿ ಆಕ್ಷಿಮೀಟರ್ ವ್ಯವಸ್ಥೆ ಮಾಡಲಾಗಿದೆ.
ಸೋಮವಾರ ವಿನೋಭನಗರದಲಿ ಈ ಸೌಲಭ್ಯಕ್ಕೆ ಮಹಾನಗರಪಾಲಿಕೆ ಸದಸ್ಯ ಎಚ್.ಎಂ.ಯೋಗೇಶ್ ಚಾಲನೆ ನೀಡಿದರು. ಸುಮಾರು 2 ಲಕ್ಷ ರೂ. ಮೌಲ್ಯದ ಆಕ್ಸಿಮೀಟರ್ ಹಾಗೂ ಸ್ಯಾನಿಟೈಜರ್‍ಗಳನ್ನು ನಗರದ ಎಲ್ಲಾ ವಾರ್ಡುಗಳ ಆಯ್ದ ಅಂಗಡಿಗಳಲ್ಲಿ ಇರಿಸಲಾಗುವುದು. ಅಗತ್ಯವಿರುವವರ ತಮ್ಮ ಆಕ್ಸಿಜನ್ ಮಟ್ಟ ಪರೀಕ್ಷೆ ಮಾಡಿಕೊಳ್ಳಬೇಕು. ತೊಂದರೆ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ತೋರಿಸಲು ಇದರಿಂದ ಅನುಕೂಲವಾಗುತ್ತದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಸಂದರ್ಭ ಪಾಲಿಕೆಯ ಪ್ರತಿಪಕ್ಷ ನಾಯಕಿ ಯಮುನಾ ರಂಗೇಗೌಡ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳಾದ ಕಾಶಿವಿಶ್ವನಾಥ್, ನಾಗರಾಜ್, ಕೆ.ರಂಗನಾಥ್ ಮತ್ತಿತರರು ಹಾಜರಿದ್ದರು.

Ad Widget

Related posts

ಪುರದಾಳು ಪಂಚಾಯಿತಿಯಲ್ಲಿ ಗುರುವಂದನೆ ಕಾರ್ಯಕ್ರಮ

Malenadu Mirror Desk

ರಷ್ಯಾ ಯುದ್ಧದಾಹಕ್ಕೆ ಕರುನಾಡ ಕುಡಿ ಬಲಿ,ಹಾವೇರಿಯ ಮೆಡಿಕಲ್ ವಿದ್ಯಾರ್ಥಿ ನವೀನ್ ಸಾವು

Malenadu Mirror Desk

ಪ್ರಧಾನಿ ಪ್ರಚಾರ ಮಾಡಿದ್ದ ಆಯನೂರಿನಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.