ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಸಾರ್ವಜನಿಕರು ಉಚಿತವಾಗಿ ನೀಡಿರುವ ಆಂಬುಲೆನ್ಸ್‌ನ್ನು ಉಪಯೋಗಿಸಿಕೊಳ್ಳಬೇಕು ಎಂದು ಡಾ.ಶ್ರೀನಿವಾಸ್‌ಕರಿಯಣ್ಣ ಮನವಿ ಮಾಡಿದರು.
ಶುಕ್ರವಾರ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದಲ್ಲಿ ತಮ್ಮ ತಂದೆಯವರಾದ ದಿ.ಕರಿಯಣ್ಣನವರ ನೆನಪಿನಲ್ಲಿ ನೀಡಿದ್ದ ಉಚಿತ ಆಂಬುಲೆನ್ಸ್‌ಗೆ ಚಾಲನೆ ನೀಡಿ ಮಾತನಾಡಿದರು.
ಶಿವಮೊಗ್ಗ ಗ್ರಾಮಾಂತರದಲ್ಲಿ ಕೋವಿಡ್ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಉಚಿತ ಆಂಬುಲೆನ್ಸ್ ನೀಡಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಆರೋಗ್ಯದ ನಿಯಮಗಳನ್ನು ಪಾಲಿಸಬೇಕು ಕೊರೋನಾಕ್ಕೆ ಹೆದರಬಾರದು ಆದರೆ ಎಚ್ಚರಿಕೆಯಂತು ಬೇಕು. ವೈದ್ಯರಾಗಿ ಈ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಮುಖಂಡರುಗಳಾದ ಇಂತಿಯಾಜ್ ಮಜರ್ ಸಾಬ್,ದೇವೇಂದ್ರಪ್ಪ, ಜಗದೀಶ್, ರುದ್ರೇಶ್, ಉಪಸ್ಥಿತರಿದ್ದರು.
previous post