ಶಿವಮೊಗ್ಗ ಎಪಿಎಂಸಿ ಮಾಜಿ ಉಪಾಧ್ಯಕ್ಷರಾಗಿದ್ದ ಭಾಗ್ಯವತಿ ಸತ್ಯನಾರಾಯಣ್ ಅವರು ಕೊರೊನ ಸೋಂಕು ಉಲ್ಬಣಗೊಂಡು ಶುಕ್ರವಾರ ನಿಧನರಾಗಿದ್ದಾರೆ.
ಆಯನೂರು ಕೋಟೆಯವರಾಗಿದ್ದ ಭಾಗ್ಯವತಿ ಅವರಿಗೆ ಸೋಂಕು ತಗುಲಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಕೃಷಿ ಕ್ಷೇತ್ರ ಮಾತ್ರವಲ್ಲದೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದ ಭಾಗ್ಯವತಿ, ಇತ್ತೀಚೆಗೆ ಸಕ್ರಿಯ ರಾಜಕಾರಣದಿಂದ ದೂರವಿದ್ದರು.
previous post