ವಿಶ್ವ ರಕ್ಷದಾನಿಗಳ ದಿನದ ಅಂಗವಾಗಿ ಸೋಮವಾರ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆ ಹಾಗೂ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸ್ವತಃ ರಕ್ತದಾನ ಮಾಡಿ ಮಾತನಾಡಿದ ವೈದ್ಯರೂ, ಕೆಪಿಸಿಸಿ ಕಾರ್ಯದರ್ಶಿಯಾದ ಡಾ.ರಾಜನಂದಿನಿ ಕಾಗೋಡು ಅವರು, ರಕ್ತದಾನ ಸರ್ವಶ್ರೇಷ್ಠವಾದುದು. ಇನ್ನೊಬ್ಬರ ಜೀವ ಉಳಿಸುವ ಅವಕಾಶ ರಕ್ತದಾನದಿಂದ ಸಿಗುತ್ತದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಮತ್ತ ಜೀವದ ಮೌಲ್ಯ ಎಲ್ಲರಿಗೂ ಅರಿವಾಗಿದೆ. ಇಂತಹ ಹೊತ್ತಲ್ಲಿ ರಕ್ತದಾನ ಅತ್ಯಂತ ಅವಶ್ಯವಾಗಿದೆ. ರೋಟರಿ ಹಾಗೂ ರೆಡ್‌ಕ್ರಾಸ್ ಸಂಸ್ಥೆಗಳು ಈ ನಿಟ್ಟಿನಲ್ಲಿ ಯಾವತ್ತೂ ಜನಪರ ಕೆಲಸ ಮಾಡುತ್ತಿವೆ. ನಮ್ಮ ಯುವಜನರು ಯಾವುದೇ ಆತಂಕಪಡದೆ ರಕ್ತದಾನ ಮಾಡಬೇಕು. ಆರೋಗ್ಯವಂತೆ ವ್ಯಕ್ತಿಗಳು ರಕ್ತದಾನಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು. ಈ ಸಂದರ್ಭ ರೋಟರಿ ಮತ್ತು ರೆಡ್ ಕ್ರಾಸ್ ರಕ್ತನಿಧಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
previous post
next post