Malenadu Mitra
ರಾಜ್ಯ ಶಿವಮೊಗ್ಗ

ಕೊರೊನ ವಾರಿಯರ್ಸ್ ಸೇವೆ ಶ್ಲಾಘನೀಯ: ಫಾದರ್ ರೋಶನ್ ಪಿಂಟೊ

ಶಿವಮೊಗ್ಗದ ಆಲ್ಕೊಳದಲ್ಲಿರುವ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯು ಶಿವಮೊಗ್ಗ
ಧರ್ಮಕ್ಷೇತ್ರ ಹಾಗೂ ಸ್ತ್ರೀಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಗಳ ಸಹಯೋಗದಲ್ಲಿ ಕಳೆದ ಒಂದು ತಿಂಗಳಿಂದ ಕೊರೊನದಿಂದ ಸಂಕಷ್ಟಕ್ಕೊಳಗಾದವರ ನೆರವಿಗೆ ಅವಿರತ ಶ್ರಮಿಸಿದೆ.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡ ಕಾರ್ಯಕ್ಷೇತ್ರದ 2000 ನಿರ್ಗತಿಕ ಬಡಕುಟುಂಬಗಳಿಗೆ,
ವಿಧವೆಯರಿಗೆ, ಶೋಷಿತರಿಗೆ, ದಿನಗೂಲಿ ಕೃಷಿ ಕಾರ್ಮಿಕರಿಗೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ,

ಶಿಕ್ಷಣ ಸಂಸ್ಥೆಗಳ 360 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ದಿನಸಿ ಪದಾರ್ಥಗಳ ಕಿಟ್ ಹಾಗೂ 320 ಪತ್ರಿಕಾ ವಿತರಕರಿಗೆ
ದಿನಸಿ ಪದಾರ್ಥಗಳ ಕಿಟ್ ಹಾಗೂ ಮಾಸ್ಕ್, ಸ್ಯಾನಿಟೈಸರ್ ವಿತರಿಸುವ ಮೂಲಕ ಮಾನವೀಯ ಕಾರ್ಯ ಮೆರೆದಿದೆ.
ಕಳೆದ 20 ದಿನಗಳಿಂದ ಶಿವಮೊಗ್ಗ ನಗರದ ಕಾರ್ಯನಿಮಿತ್ತ ಆರಕ್ಷಕ ಸಿಬ್ಬಂದಿಗಳಿಗೆ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಟೀ ಮತ್ತು ಲಘುಉಪಹಾರ ಮತ್ತು ಭಾನುವಾರ ಮಧ್ಯಾಹ್ನ ಊಟದ ವ್ಯವಸ್ಥೆ ಹಾಗೂ ಮಾನಸಾಧಾರ ಪುನರ್‍ವಸತಿ ಕೇಂದ್ರದ ಮಾನಸಿಕ ಅಸ್ವಸ್ಥರಿಗೆ ಮತ್ತು ಸಿಬ್ಬಂದಿಗಳಿಗೆ ಒಂದು ದಿನಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದರ ಮೂಲಕ ವಿವಿಧ ಸೇವಾಕಾರ್ಯಗಳಲ್ಲಿ ಸಂಸ್ಥೆ ತನ್ನನ್ನೇ ತೊಡಗಿಸಿಕೊಂಡಿದೆ.
ಮಾನಸಿಕ ಸ್ಥೈರ್ಯ:
ಸಂಸ್ಥೆಯು ಮನೋವೈದ್ಯರು, ತಜ್ಞರು ಹಾಗೂ ಗಣ್ಯರಿಂದ ವೆಬಿನಾರ್ ಮೂಲಕ ಕೊರೊನ ಪೀಡಿತರು ಮತ್ತು ಸಂಕಷ್ಟಕ್ಕೊಳಗಾಧವರಿಗೆ ಮನೋಬಲ ತುಂಬುವ ಕೆಲಸವನ್ನೂ ಮಾಡಿದೆ. ಡಾ.ಅರವಿಂದ್, ಡಾ. ಕೆ.ಎಸ್.ಪವಿತ್ರ, ಡಾ.ಪ್ರೀತಿ ಶಾನುಬಾಗ್, ಡಾ.ಸಂದ್ಯಾಕಾವೇರಿ, ಸದಾಶಿವ, ಡಾ.ಶ್ವೇತಾ, ಗಣ್ಯರಾರ ಕೆ.ಟಿ. ಗಂಗಾಧರ್ ಅವರಿಂದ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಂಸ್ಥೆಯ ನಿರ್ದೇಶಕರಾದ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೊ ರವರು ನೀಡಿದ್ದ ಸಂದೇಶದಲ್ಲಿ ಕೊರೋನ 2ನೇ ಅಲೆಯ ಅಬ್ಬರವು ಭಾರತದಾದ್ಯಂತ ಜನಜೀವನವನ್ನೇ ತಲ್ಲಣಗೊಳಿಸಿದೆ. ಕೊರೊನದಿಂದ ಬಡತನ ರೇಖೆಗಿಂತಕೆಳಗಿರುವವ ಜನರ ದೈನಂದಿನ ಬದುಕು ಬೀದಿಪಾಲಾಗಿದೆ ಇಂತಹವರಿಗೆ ನೆರವು ನೀಡುವುದು ನಮ್ಮ ಧರ್ಮ ಎಂದು ಹೇಳಿದ್ದಾರೆ. ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೋಂಕು ನಿರ್ವಹಿಸಲು ಶ್ರಮಿಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಅಂಗನವಾಡಿ
ಮತ್ತು ಆಶಾಕಾರ್ಯಕರ್ತರು, ಆರಕ್ಷಕ ಸಿಬ್ಬಂದಿಗಳ ಕಾರ್ಯವನ್ನು ರೋಶನ್ ಪಿಂಟೋ ಶ್ಲಾಘಿಸಿದ್ದಾರೆ

Ad Widget

Related posts

ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪೆ ಹಬ್ಬ

Malenadu Mirror Desk

ಶ್ರೀಕಾಂತ್‌ಗೆ ಅದ್ದೂರಿ ಸ್ವಾಗತ, ವಿಧ್ಯುಕ್ತವಾಗಿ ಕಾಂಗ್ರೆಸ್ ಸೇರ್ಪಡೆ, ತೆರೆದ ಕಾರಿನಲ್ಲಿ ಭವ್ಯ ಮೆರವಣಿಗೆ, ಅಭಿಮಾನಿಗಳ ಹರ್ಷೋದ್ಘಾರ

Malenadu Mirror Desk

ಭೂಮಿ ಹಕ್ಕಿಗಾಗಿ ಶರಾವತಿ ಮುಳುಗಡೆ ಸಂತ್ರಸ್ಥರ ಬೃಹತ್ ಪ್ರತಿಭಟನೆ
ಮಾ.29 ರಂದು ಶಿವಮೊಗ್ಗದಲ್ಲಿ ಪಾದಯಾತ್ರೆ, ಅಹೋರಾತ್ರಿ ಧರಣಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.